×
Ad

ಕಸ್ಟಡಿ ಸಾವು: ಮಹಾರಾಷ್ಟ್ರದಲ್ಲಿ ಅತ್ಯಧಿಕ

Update: 2017-03-21 21:53 IST

ಮುಂಬೈ,ಮಾ.21: ಇತರ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಕಸ್ಟಡಿ ಸಾವುಗಳು ತುಸು ಅಧಿಕವೆಂದು ಕೇಂದ್ರ ಸರಕಾರವು ಮಂಗಳವಾರ ಒಪ್ಪಿಕೊಂಡಿದೆ. ಮಹಾರಾಷ್ಟ್ರದಲ್ಲಿ 2013ರಲ್ಲಿ 35 ಮಂದಿ, 2014ರಲ್ಲಿ 21 ಮಂದಿ ಹಾಗೂ 2015ರಲ್ಲಿ 19 ಮಂದಿ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದು, ಇದು ಇತರ ಎಲ್ಲಾ ರಾಜ್ಯಗಳಿಗಿಂತಲೂ ಅಧಿಕವೆಂದು ಕೇಂದ್ರ ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ರಾಷ್ಟ್ರಾದ್ಯಂತ ಸಂಭವಿಸಿದ ಕಸ್ಟಡಿ ಸಾವುಗಳ ಕುರಿತ ಅಂಕಿಅಂಶವನ್ನು ಮಂಡಿಸಿದ ಸಂದರ್ಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

ಕಸ್ಟಡಿ ಸಾವಿಗೆ ಕಾರಣರಾದ ಪೊಲೀಸ್ ಸಿಬ್ಬಂದಿಯ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಾನವಹಕ್ಕು ಆಯೋಗ ಹಾಗೂ ಸುಪ್ರೀಂಕೋರ್ಟ್ ಜಾರಿಗೊಳಿಸಿರುವ ಆದೇಶಗಳು ಹಾಗೂ ಮಾರ್ಗದರ್ಶಿ ಸೂತ್ರಳು ಸೂಚಿಸಿರುವುದಾಗಿ ರಿಜಿಜು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಸಂಸದ,ಮುಂಬೈನ ಮಾಜಿ ಪೊಲೀಸ್ ಆಯುಕ್ತ ಸತ್ಯಪಾಲ್‌ಸಿಂಗ್ ಅವರು ಮಹಾರಾಷ್ಟ್ರ ಪೊಲೀಸರು ದೇಶದಲ್ಲೇ ಅತ್ಯುತ್ತಮ ಪೊಲೀಸ್ ಪಡೆಯೆಂದು ಹೇಳಿದಾಗ ಹಲವಾರು ಸಂಸದರು ಜೋರಾಗಿ ನಕ್ಕರು.ಆಗ ಸುಮಿತ್ರಾ ಮಹಾಜನ್ ಅವರು, ಸತ್ಯಪಾಲ್ ಅವರಿಗೆ ನಿಮ್ಮ ದಾಖಲೆಗಳನ್ನು ಕೂಡಾ ನಾವು ಪರಿಶೀಲಿಸಬೇಕಾಗಿದೆಯೆಂದು ಚಟಾಕಿ ಹಾರಿಸಿದಾಗ, ಸದನ ಮತ್ತೆ ನಗೆಗಡಲಲ್ಲಿ ತೇಲಿತು.

 ಎಲ್ಲಾ ಕಸ್ಟಡಿಸಾವುಗಳು ಪೊಲೀಸ್ ಕಸ್ಟಡಿಯಲ್ಲೇ ಸಂಭವಿಸಿಯೆಂದು ಹೇಳಲಾಗದು.ಯಾಕೆಂದರೆ ಹಲವಾರು ಸಾವುಗಳು ನ್ಯಾಯಾಂಗ ಕಸ್ಟಡಿಯಲ್ಲಿಯೂ ಸಂಭವಿಸಿರುತ್ತವೆ. ಇವುಗಳಲ್ಲಿ ಕೆಲವು ಸಹಜ, ಇನ್ನು ಕೆಲವು ಅನಾರೋಗ್ಯದಿಂದಾಗಿ ಸಾವು ಸಂಭವಿಸಿೆ ಎಂದು ಸತ್ಯಪಾಲ್ ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News