ಉರ್ದು ಕೇವಲ ಭಾಷೆಯಲ್ಲ, ಅದರೊಳಗೆ ನಮ್ಮ ಸಂಸ್ಕೃತಿಯಿದೆ : ಬಿಹಾರ ರಾಜ್ಯಪಾಲ ರಾಮನಾಥ್

Update: 2017-03-23 13:53 GMT

ಪಾಟ್ನ, ಮಾ. 23: ಬಿಹಾರ ಉರ್ದು ಅಕಾಡಮಿ ಆಯೋಜಸಿದ ಎರಡು ದಿನಗಳ ಉರ್ದು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ "ಉರ್ದು ಭಾಷೆ ಇಡೀ ಜಗತ್ತಿಗೆ ಪ್ರೀತಿಯ ಸಂದೇಶ ನೀಡುತ್ತದೆ. ಉರ್ದು ಕೇವಲ ಒಂದು ಭಾಷೆಯಲ್ಲ. ಅದರಲ್ಲಿ ನಮ್ಮ ಇಡೀ ಸಂಸ್ಕೃತಿ ಒಳಗೊಂಡಿದೆ" ಎಂದು ಹೇಳಿದ್ದಾರೆ.

ಈ ಭಾಷೆಯನ್ನುದೇಶದ ಬರಹಗಾರರು ಸಮೃದ್ಧಗೊಳಿಸಿದರು. ಅದೇ ರೀತಿ ಹೊರದೇಶಗಳಲ್ಲಿ ವಾಸವಿರುವ ಉರ್ದು ಬರಹಗಾರರು, ಶಾಯರಿಗಳು ನೀಡಿದ ಕೊಡುಗೆಯನ್ನು ಕೂಡಾ ನಿರ್ಲಕ್ಷಿಸಲು ಸಾಧ್ಯವಿಲ್ಲ. " ನಮ್ಮ ಸಮಾಜದಲ್ಲಿ ಸಾಹಿತ್ಯ ಮಹತ್ವಪೂರ್ಣವಾಗಿದೆ. ಅದರಲ್ಲೂ ಉರ್ದುಭಾಷೆ ಸಾಹಿತ್ಯದಿಂದ ಸಮೃದ್ಧವಾಗಿದೆ.

ಯಾವುದೇ ಒಂದು ಧರ್ಮದವರ ಕೊಡುಗೆಗೆ ಉರ್ದು ಭಾಷೆ ಸೀಮಿತವಾಗಿಲ್ಲ. ಎಲ್ಲ ಧರ್ಮದವರ ಕೊಡುಗೆ ಅದರಲ್ಲಿದೆ. ಹಿಂದೂ, ಸಿಖ್, ಮುಸ್ಲಿಮ್ ಹೀಗೆ ಎಲ್ಲರೂ ಉರ್ದು ಭಾಷೆಯನ್ನು ಸಮೃದ್ಧ ಗೊಳಿಸಿದ್ದಾರೆ ಎಂದು ಕೋವಿಂದ್ ಹೇಳಿದ್ದಾರೆ.

ದೇಶದ ಹೊರಗೆ ಇರುವ ಲೇಖಕರು ಉರ್ದು ಭಾಷೆ ಪ್ರೇಮಿಗಳಾಗಿದ್ದಾರೆ. ತಮ್ಮ ಲೇಖನಗಳನ್ನು ಉರ್ದು ಭಾಷೆಯಲ್ಲಿ ಬರೆದು ಭಾಷೆಯ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಬಿಹಾರದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಉರ್ದು ವಿಭಾಗ ಕಾರ್ಯವೆಸಗುತ್ತಿದೆ. ಇದರಲ್ಲಿ ಉತ್ತಮ ಶಿಕ್ಷಕರು ಮತ್ತು ಪರಿಶ್ರಮ ಪಡುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿದ್ದಾರೆ.

ಇವರೆಲ್ಲರೂ ಸೇರಿ ಉರ್ದುಭಾಷೆಯ ಪ್ರಗತಿಗೆ ಕೆಲಸ ಮಾಡುತ್ತಾರೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಬಿಹಾರದ ರಾಜ್ಯಪಾಲ ಕೋವಿಂದ್ ಹೇಳಿದರು. ಬಿಹಾರ ಸರಕಾರ ಉರ್ದು ಭಾಷೆಯ ಮತ್ತು ಸಾಹಿತ್ಯದ ಪ್ರಗತಿಗೆ ಸಕಲ ಪ್ರಯತ್ನ ನಡೆಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News