ಕಡಿಮೆ ಬೇಡಿಕೆಯ ಕೋರ್ಸ್‌ಗಳನ್ನು ಮುಚ್ಚಲು ಐಐಟಿ, ತಾಂತ್ರಿಕ ಸಂಸ್ಥೆಗಳಿಗೆ ಕೇಂದ್ರ ಸೂಚನೆ
Update: 2017-03-23 20:24 IST
ಹೊಸದಿಲ್ಲಿ, ಮಾ.23: ಕಳೆದ ಮೂರು ವರ್ಷಗಳಲ್ಲಿ ತೀರಾ ಕಡಿಮೆ ಬೇಡಿಕೆಯಿರುವ ಕೋರ್ಸ್‌ಗಳನ್ನು ಮುಚ್ಚುವಂತೆ ಪ್ರತಿಷ್ಠಿತ ಐಐಟಿ ಸೇರಿದಂತೆ ಕೇಂದ್ರ ಸರಕಾರದ ನಿಧಿ ಸಹಾಯ ಪಡೆಯುತ್ತಿರುವ ಎಲ್ಲಾ ತಾಂತ್ರಿಕ ಸಂಸ್ಥೆಗಳಿಗೆ ಮಾನವಸಂಪನ್ಮೂಲ ಸಚಿವಾಲಯವು ಗುರುವಾರ ತಿಳಿಸಿದೆ.
ಮಾರುಕಟ್ಟೆ ಅವಕಾಶ, ಉದ್ಯೋಗಾರ್ಹತೆ ಹಾಗೂ ಉನ್ನತ ಶಿಕ್ಷಣದ ಅವಶ್ಯಕತೆಗಳ ಬಗ್ಗೆ ವಿಶ್ಲೇಷಣೆ ನಡೆಸಿದ ಬಳಿಕವೇ ಹೊಸ ಕೋರ್ಸ್‌ಗಳನ್ನು ಹಾಗೂ ಪಠ್ಯವಿಷಯಗಳನ್ನು ಆರಂಭಿಸುವಂತೆಯೂ ಸಚಿವಾಲಯವು ಈ ಶಿಕ್ಷಣ ಸಂಸ್ಥೆಗಳನ್ನು ಕೇಳಿಕೊಂಡಿದೆ.
ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಮಹೇಂದ್ರ ನಾಥ್ ಪಾಂಡೆ ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.