×
Ad

ಚಪ್ಪಲಿಯಿಂದ ಥಳಿಸಿದ ಶಿವಸೇನಾ ಸಂಸದನ ವಿರುದ್ಧ ಎಫ್‌ಐಆರ್

Update: 2017-03-24 11:03 IST

ಹೊಸದಿಲ್ಲಿ, ಮಾ.24: ಏರ್ ಇಂಡಿಯಾದ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಶಿವಸೇನಾ ಸಂಸದ ಗಾಯಕ್ವಾಡ್ ವಿರುದ್ಧ ಹಲ್ಲೆಗೊಳಗಾದ ಏರ್ ಇಂಡಿಯಾದ  ಡ್ಯೂಟಿ ಮ್ಯಾನೇಜರ್ ಆರ್.ಸುಕುಮಾರ್  ನೀಡಿರುವ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆ ವಿಮಾನಯಾನಕ್ಕೆ ನಿಷೇಧ ಹೇರಲಾಗಿದೆ. ಗಾಯಕ್ವಾಡ್ ಅವರನ್ನು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ "ನಿಷೇಧಿತ ಪ್ರಯಾಣಿಕ" ಪಟ್ಟಿಗೆ ಸೇರಿಸಿದೆ ಎಂದು ತಿಳಿದುಬಂದಿದೆ.ಅವರ ವಿರುದ್ಧ ಏರ್ ಇಂಡಿಯಾ ಸಿಬ್ಬಂದಿಗಳು ಪ್ರತಿಭಟನೆಗೆ ನಿರ್ಧರಿಸಿದ್ದಾರೆ.

 ಗುರುವಾರ ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪುಣೆಯಿಂದ  ಆಗಮಿಸಿದ ಏರ್ ಇಂಡಿಯಾ ವಿಮಾನ ಎಐ 852ರಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ನೀಡದ ವಿಚಾರದಲ್ಲಿ ಕೋಪಗೊಂಡ ಸಂಸದ ಗಾಯಕ್ವಾಡ್ ಅವರು ಏರ್ ಇಂಡಿಯಾದ ಸಿಬ್ಬಂದಿ ಸುಕುಮಾರ್ ವಿರುದ್ಧ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ದೂರು ಬಂದರೆ ಕ್ರಮ:ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಸಂಸದ ಗಾಯಕ್ವಾಡ್ ವಿರುದ್ಧ ದೂರು ಬಂದರೆ ಕ್ರಮ ಕೈಗೊಳ್ಳಲಾಗಿವುದು ಎಂದು ಲೋಕಸಭಾ ಸ್ವೀಕರ್ ಸುಮಿತ್ರಾ ಮಹಾಜನ್ ತಿಳಿಸಿದ್ದಾರೆ.

ಯಾರೂ   ಇಂತಹ ಕೆಲಸ ಮಾಡಬಾರದು. ಸಂಸದರಾಗಿ ಗಾಯಕ್ವಾಡ್ ಇಂತಹ ಕೆಲಸ ಮಾಡಿರುವುದು ಸರಿಯಲ್ಲ  ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News