ಸಿನಿ ಟ್ಯೂಬ್
ಇವತ್ತು ಮೊಬೈಲ್ ಹಾಗೂ ಅದರಲ್ಲಿನ ಕ್ಯಾಮರಾ ಸರ್ವವ್ಯಾಪಿಯಾಗಿರುವ ಕಾಲ. ಆದರೆ, ಕ್ಯಾಮರಾ ಏನೆಂದರೆ ಗೊತ್ತಿಲ್ಲದ ಚಿಂದಿ ಆಯುವ ಹುಡುಗನೊಬ್ಬನಿಗೆ ಕ್ಯಾಮರಾ ದೊರೆತರೆ ಏನಾಗಬಹುದು? ಆ ಹುಡುಗ ಕ್ಯಾಮರಾವನ್ನು ಕಂಡುಕೊಳ್ಳುವ ಬಗೆ ಹೇಗೆ? ಬದುಕಿನ ಬಗ್ಗೆ ತನ್ನ ಹಾಗೂ ತನ್ನ ತಾಯಿಯ ದೃಷ್ಟಿಕೋನ ಹೇಗೆ? ದೃಶ್ಯಕಾವ್ಯವನ್ನೇ ಬರೆಯಬಲ್ಲ ಕ್ಯಾಮರಾ ತನ್ನ ಅವ್ವನ ಮೇಲೆ ಯಾವ ಪರಿಣಾಮ ಬೀರಬಹುದು? ಅಸಲಿಗೆ ಕ್ಯಾಮರಾ ಇಲ್ಲದೆಯೂ ನಮ್ಮ ಬಾಲ್ಯಗಳೆಲ್ಲ ವರ್ಚುವಲ್ ಕ್ಯಾಮರಾಗಳಲ್ಲಿ ಮುಳುಗಿದ್ದಿರಲಿಲ್ಲವೇ? ಚಿಂದಿಯಲ್ಲಿ ಸಿಕ್ಕಿದ ಕ್ಯಾಮರಾ ಕಳೆದುಕೊಂಡ ನಂತರ ಏನಾಯಿತು? ನಮ್ಮಾಳಗಿನ ಬಾಲ್ಯ, ನಮ್ಮದೇ ಮುಗ್ಧತೆ, ಚಿಂದಿ ಆಯುವ ಹುಡುಗರಲ್ಲಿನ ವಿಚಿತ್ರ ವಿದ್ವತ್ತು, ಇಲಿಗಳೊಂದಿಗೆ ಸಹಜೀವನ, ನಗು ಮೊದಲಾದವುಗಳನ್ನು ಮನಸ್ಸಿಗೆ ತಟ್ಟುವಂತೆ ಚಿತ್ರೀಕರಿಸಿದ ಕಿರುಚಿತ್ರ ಕ್ಯಾಮರಾ. ಕಿರುಚಿತ್ರ ವಿಭಾಗದಲ್ಲಿ ಹಿರಿಯ ಪ್ರಶಸ್ತಿಗಳನ್ನು ಪಡೆದಿರುವ ಇದನ್ನು ವೀಕ್ಷಿಸಲು ಯೂಟ್ಯೂಬ್‌ನ ಈ ಲಿಂಕನ್ನು ಬಳಸಿ.
https://youtu.be/Y0nPCc1ZpIY