ರಿಲಯನ್ಸ್ ಜಿಯೊ ಪ್ರೈಮ್ ಸದಸ್ಯತ್ವ ಪಡೆಯುವ ಅವಧಿ ಇನ್ನೊಂದು ತಿಂಗಳು ವಿಸ್ತರಣೆ ?

Update: 2017-03-27 08:03 GMT

ಹೊಸದಿಲ್ಲಿ, ಮಾ.27: ರಿಲಾಯನ್ಸ್ ಜಿಯೊ ತನ್ನ ಪ್ರೈಮ್ ಸದಸ್ಯತ್ವ ಪಡೆಯುವ ಅವಧಿಯನ್ನು ಇನ್ನೊಂದು ತಿಂಗಳ ತನಕ ವಿಸ್ತರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಗ್ರಾಹಕರಿಂದ ಅಷ್ಟೊಂದು ಉತ್ಸಾಹದಾಯಕ ಪ್ರತಿಕ್ರಿಯೆ ದೊರೆಯದೇ ಇರುವುದರಿಂದ ಸದಸ್ಯತನ ಪಡೆಯುವ ಅವಧಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಜಿಯೊ ಹ್ಯಾಪಿ ನ್ಯೂ ಇಯರ್ ಆಫರ್ ಈ ತಿಂಗಳ 31ರಂದು ಅಂತ್ಯಗೊಳ್ಳಲಿದೆ.

ಇಲ್ಲಿಯ ತನಕ ಜಿಯೊ ಇದರ 22ರಿಂದ 27 ಮಿಲಿಯನ್ ಬಳಕೆದಾರರು ಪ್ರೈಮ್ ಸದಸ್ಯರಾಗಿದ್ದು ಕಂಪೆನಿ ಈಗಾಗಲೇ ತನ್ನ ಶೇ.50ರಷ್ಟು ಚಂದಾದಾರರನ್ನು ಪಡೆಯುವ ಗುರಿ ತಲುಪಿದೆಯೆಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ತನ್ನ ಚಂದಾದಾರರ ಪಟ್ಟಿಗೆ ಜಿಯೊ 100 ಮಿಲಿಯನ್ ಗ್ರಾಹಕರನ್ನು ಸೇರಿಸಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದರು. ಇದೇ ಸಮಾರಂಭದಲ್ಲಿ ಅವರು ಜಿಯೊ ಪ್ರೈಮ್ ಸದಸ್ಯತನದ ಬಗ್ಗೆ ಮಾಹಿತಿ ನೀಡಿದ್ದರು. ಒಂದು ಸಲದ ಪಾವತಿಯಾಗಿ ರೂ.99 ನೀಡಿದ ಜಿಯೊ ಸದಸ್ಯರು ಈ ಆಫರನ್ನು ಅನಿಯಮಿತ ಕಾಲದ ತನಕ ಉಪಯೋಗಿಸಬಹುದೆಂದೂ ಅವರು ಹೇಳಿದ್ದರು. ಇತರ ಬಳಕೆದಾರರು ತಿಂಗಳ ಶುಲ್ಕವಾಗಿ ರೂ.303 ಪಾವತಿಸಿ ಮಾರ್ಚ್ 31ರ ತನಕ ಸೇವೆಯನ್ನು ಪಡೆಯಬಹುದಾಗಿದೆ.

ಈಗಿನ ರಿಲಾಯನ್ಸ್ ಜಿಯೊ ಬಳಕೆದಾರರು ಜಿಯೊ ಪ್ರೈಮ್ ಸದಸ್ಯತನ ಪಡೆಯಬೇಕಾದಲ್ಲಿ ಮೈ ಜಿಯೊ ಆ್ಯಪ್ ಗೆ ಅಥವಾ ಜಿಯೊ ಅಧಿಕೃತ ವೆಬ್ ಸೈಟಿಗೆ ಹೋಗಿ ರಿಜಿಸ್ಟ್ರರ್ ಮಾಡಿಕೊಳ್ಳಬೇಕು. ಇದರ ಹೊರತಾಗಿ ಬೈ ವನ್, ಗೆಟ್ ವನ್ ಆಫರ್ ಅನ್ವಯ ಜಿಯೊ ಪ್ರೈಮ್ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚುವರಿ ಉಚಿತ ಡಾಟಾ ಒದಗಿಸಲಾಗುವುದು ಎಂದು ಕಂಪೆನಿ ಹೇಳಿದೆ.

ಜಿಯೊ ಮನಿ ಆ್ಯಪ್ ಮುಖಾಂತರ ರಿಚಾರ್ಜ್ ಮಾಡುವ ಪ್ರೈಮ್ ಸದಸ್ಯರಿಗೆ ರೂ 50 ಕ್ಯಾಶ್ ಬ್ಯಾಕ್ ಸೌಲಭ್ಯವನ್ನೂ ಒದಗಿಸಲಾಗುವುದು. ಜಿಯೊ ಮನಿ ಆ್ಯಪ್ ಉಪಯೋಗಿಸಿ ರೂ.303 ರಿಚಾರ್ಜ್ ಮಾಡಿದವರು ರಿಲಾಯನ್ಸ್ ಜಿಯೊ ಸದಸ್ಯತ್ವ ಪಡೆದಲ್ಲಿ ಅವರಿಗೆ ರೂ.100 ಕ್ಯಾಶ್ ಬ್ಯಾಕ್ ದೊರೆಯುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News