×
Ad

ವಿಚಿತ್ರ ಪ್ರಾಣಿಯ ಫೋಟೋ, ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್

Update: 2017-03-28 16:15 IST

ಹೊಸದಿಲ್ಲಿ, ಮಾ.27: ಸ್ಪೇನ್ ದೇಶದ ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಚಿತ್ರ ಪ್ರಾಣಿಯೊಂದರ ಫೋಟೋ ಹಾಗೂ ವೀಡಿಯೋ ವೈರಲ್ ಆಗಿ ಬಿಟ್ಟಿವೆ.

ಫೆಬ್ರವರಿ 13ರಂದು ಲುಜನ್ ಎರೋಲ್ಸ್ ಎಂಬ ಹೆಸರಿನ ಈ ಮಹಿಳೆ ಹಾವಿನಂತೆ ಕಾಣುವ ಎರಡು ತಲೆ ಹಾಗೂ ಮೂರು ಕಣ್ಣುಗಳಿರುವ ಕಂಬಳಿ ಹುಳವೊಂದರ ಒಂದು ಫೋಟೋ ಹಾಗೂ ಎರಡು ವೀಡಿಯೋಗಳನ್ನು ತನ್ನ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಳು. ‘‘ಇದೇನೆಂದು ಯಾರಾದರೂ ಹೇಳಬಲ್ಲಿರಾ ? ಎರಡು ತಲೆಗಳು, ಮೂರು ಕಣ್ಣುಗಳು ಹಾಗೂ ವಿಚಿತ್ರ ಚರ್ಮ,’’ ಎಂದು ಆಕೆ ಬರೆದಿದ್ದಳು. ಆ ದಿನದಿಂದ ಆ ಪೋಸ್ಟ್ ಸಾವಿರಾರು ಮಂದಿಯಿಂದ ಹಲವು ವಿಧದ ಕಮೆಂಟುಗಳನ್ನು ಆಹ್ವಾನಿಸಿದೆ.

ಕೆಲವರು ಇದೊಂದು ತುಂಡಾದ ಹಾವಿನ ಬಾಲವೆಂದು ಹೇಳಿದರೆ ಇನ್ನು ಕೆಲವರು ಅದು ಪೊಕೆಮಾನ್ ಕೂಡ ಆಗಿರಬಹುದು ಎಂದು ಹೇಳಿದ್ದರು. ಕೊನೆಗೆ ಕೆಲವರು ಇದೊಂದು ಕಂಬಳಿ ಹುಳು - ನಿಖರವಾಗಿ ಹೇಳಬೇಕಾದರೆ ಎಲಿಫೆಂಟ್ ಹಾಕ್ ಮೌತ್ ಕ್ಯಾಟರ್ ಪಿಲ್ಲರ್ ಎಂದು ಕಂಡು ಹಿಡಿದು ಬಿಟ್ಟರು. ಈ ಕಂಬಳಿಹುಳಗಳನ್ನು ಮುಟ್ಟಿದಾಗ ಅವು ಹಾವುಗಳ ಪೋಸು ನೀಡುತ್ತವೆ ಹಾಗೂ ವೈರಿಗಳನ್ನು ದೂರ ಮಾಡಲು ಪ್ರಯತ್ನಿಸುತ್ತವೆ. ಈ ಪೋಸ್ಟ್ ಇಲ್ಲಿಯವರೆ 2 ಲಕ್ಷ ಶೇರ್ ಹಾಗೂ 6000ಕ್ಕೂ ಅಧಿಕ ಕಮೆಂಟುಗಳನ್ನು ಆಕರ್ಷಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News