ತನ್ನ ನವಜಾತ ಅವಳಿ ಮಕ್ಕಳನ್ನು ಮನೆಗೆ ಕರೆದೊಯ್ದ ಕರಣ್ ಜೋಹರ್

Update: 2017-03-29 12:52 GMT

ಮುಂಬೈ,ಮಾ.29: ಅವಿವಾಹಿತನಾಗಿದ್ದರೂ ಬಾಡಿಗೆ ತಾಯಿಯ ಮೂಲಕ ಇಬ್ಬರು ಮುದ್ದಾದ ಅವಳಿ ಮಕ್ಕಳಿಗೆ ಅಪ್ಪನಾಗಿರುವ ಬಾಲಿವುಡ್ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರು ಬುಧವಾರ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ದಿದ್ದಾರೆ. ಕರಣ್ ತಾಯಿ ಹೀರೂ ಅವರು ಈ ಮಕ್ಕಳ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕರಣ್ ಮಕ್ಕಳೊಂದಿಗೆ ಆಸ್ಪತ್ರೆಯಿಂದ ಹೊರಗಡಿಯಿಡುತ್ತಿರುವ ಮತ್ತು ಕಾರು ಹತ್ತುತ್ತಿರುವ ಚಿತ್ರಗಳು ಇಂಟರ್‌ನೆಟ್‌ನಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿವೆ.

ಈ ಸಂತಸದ ಸಂದರ್ಭದಲ್ಲಿ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ವೈದ್ಯರು ಕರಣ್ ಜೊತೆಯಲ್ಲಿದ್ದರು.

ಗಂಡು ಮಗುವಿಗೆ ತನ್ನ ದಿವಂಗತ ತಂದೆ,ಖ್ಯಾತ ನಿರ್ಮಾಪಕ ಯಶ್ ಜೋಹರ್ ಹೆಸರನ್ನಿಟ್ಟಿರುವ ಕರಣ್ ಪುತ್ರಿಗೆ ತನ್ನ ತಾಯಿ ಹೀರೂ ಅವರ ಹೆಸರಿನ ಅಕ್ಷರಗಳನ್ನು ಸ್ಥಾನಪಲ್ಲಟಗೊಳಿಸಿ ರೂಹಿ ಎಂದು ನಾಮಕರಣ ಮಾಡಿದ್ದಾರೆ.

ಬಾಡಿಗೆ ತಾಯಿಯ ಗರ್ಭದ ಮೂಲಕ 30 ವಾರಗಳಲ್ಲಿ ಜನಿಸಿದ್ದ ಯಶ್ ಮತ್ತು ರೂಹಿ ಅವರನ್ನು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಏಳು ವಾರಗಳ ಕಾಲ ಇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News