ನಾಮ್ ಶಬಾನಾ: ತಾಪಸಿ ಸಾಹಸ ಚಿತ್ರದ ಹೈಲೈಟ್, ಕತೆ ಮಾತ್ರ ಅಷ್ಟೇ ಲೈಟ್
ಹೊಸದಿಲ್ಲಿ, ಮಾ.30: ಬಹು ನಿರೀಕ್ಷಿತ ಚಿತ್ರ ನಾಮ್ ಶಬಾನಾ ಬಿಡುಗಡೆಯಾಗಿದೆ. ಚಿತ್ರದ ನಾಯಕಿ ತಾಪಸೀ ಪನ್ನು ಅವರ ನಟನೆ ಮತ್ತು ಸಾಹಸವೇ ಚಿತ್ರದ ಹೈಲೈಟ್ ಆಗಿದ್ದರೆ ಚಿತ್ರದ ಕತೆ ಮಾತ್ರ ಅಷ್ಟೇ ಲೈಟ್ ಆಗಿದೆ. ಚಿತ್ರದ ನಿರ್ದೇಶಕ ನೀರಜ್ ಪಾಂಡೆ ದೇಶಭಕ್ತಿಯ ಭಾವವನ್ನು ಬೆಳೆಸುವ ಚಿತ್ರಗಳಿಗೆ ಹೆಸರುವಾಸಿಯಾದಂತೆ ಈ ಚಿತ್ರದಲ್ಲೂ ದೇಶಭಕ್ತಿಯ ಕಿಚ್ಚು ನಾಯಕಿಯಲ್ಲಿರುವುದು ಸ್ಪಷ್ಟ.
ಅದೇ ಸಮಯ ಚಿತ್ರ ಹೊಸತನದ ಕೊರತೆಯೂ ಎದುರಿಸುತ್ತಿದ್ದು ಚಿತ್ರದ ಕೆಲ ದೃಶ್ಯಗಳಲ್ಲಿ ನಾಯಕ ತಾಪಸಿ ಖಳರ ವಿರುದ್ಧ ಹೋರಾಡಿದರೆ, ಇನ್ನು ಕೆಲವು ದೃಶ್ಯಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ಹುಡುಗರ ಏನು ಮಾಡುತ್ತಾರೆಂದು ನಾಯಕ ನಟ ಅಕ್ಷಯ್ ಕುಮಾರ್ ಆಕೆಗೆ ತೋರಿಸಿದ್ದು ಬಿಟ್ಟರೆ ಚಿತ್ರದಲ್ಲಿ ನಾವೀನ್ಯತೆಯೇನೂ ಇಲ್ಲವಾಗಿದೆ.
ಚಿತ್ರದಲ್ಲಿ ತಾಪಸಿ ನಾಯಕಿ ಶಬಾನಾ ಪಾತ್ರಧಾರಿಯಾಗಿದ್ದಾರೆ. ತನ್ನ ತಾಯಿಯೊಡನೆ ವಾಸವಾಗಿರುವ ಶಬಾನಾಳನ್ನು ದೇಶದ ವೈರಿಗಳ ವಿರುದ್ಧದ ಹೋರಾಟದಲ್ಲಿ ಅತ್ಯಧಿಕ ಅಧಿಕಾರಗಳನ್ನು ಹೊಂದಿರುವ ಗುಪ್ತಚರ ಸಂಸ್ಥೆಯೊಂದಿಗೆ ಸೇರಲು ಆಯ್ಕೆ ಮಾಡಲಾಗುತ್ತದೆ. ಚತುರೆ ಸ್ಪೆಶಲ್ ಏಜೆಂಟ್ ಆಕೆ ಹೇಗಾದಳೆಂದು ಚಿತ್ರ ತಿಳಿಸುತ್ತದೆ. ಚಿತ್ರದಲ್ಲಿ ಆಕೆ ಮಾಡಿದ ಪಾತ್ರಕ್ಕಾಗಿ ಅದೆಷ್ಟೋ ನಟಿಯರು ಹಂಬಲಿಸಿದ್ದಿರಬಹುದು. ಆಕೆಯ ಸಾಹಸ ಚಿತ್ರದಲ್ಲಿ ಅದೆಷ್ಟಿದೆಯೆಂದರೆ ಹಲವಾರು ಬಾರಿ ಆಕೆಯೇ ಇದನ್ನೆಲ್ಲಾ ಮಾಡಿದ್ದಾಳೆಯೇ ಎಂದು ಮೂಗಿಗೆ ಬೆರಳಿಡುವಂತೆ ಮಾಡುತ್ತದೆ.
ಚಿತ್ರ ಕಥೆ ಒಂದು ನಿರ್ದಿಷ್ಟ ಸ್ಥಳಕ್ಕೆ ಸೀಮಿತಗೊಳ್ಳದೆ ಯುರೋಪಿಯನ್ ನಗರಗಳಿಂದ ಹಿಡಿದು ದೇಸಿ ಸ್ಥಳಗಳಿಗೆ ಬದಲಾವಣೆಯಾಗುತ್ತಾ ಹೋಗುತ್ತದೆ. ಮನೋಜ್ ಬಾಜಪೇಯಿ ನೇತೃತ್ವದ ಗೂಢಚರರ ತಂಡವು ಜಾಗತಿಕ ಶಸ್ತ್ರಾಸ್ತ್ರ ಹಾಗೂ ಡ್ರಗ್ಸ್ ಸ್ಮಗ್ಲರ್ ಒಬ್ಬನ ಬೆನ್ನ ಹಿಂದೆ ಬಿದ್ದಿರುವುದೇ ಇದಕ್ಕೆ ಕಾರಣ. ಆದರೆ ಚಿತ್ರದ ನಾಯಕಿಯ ಗುಣಗಳನ್ನು ಹೊಗಳುವಂತಹದ್ದೇನೂ ಚಿತ್ರದಲ್ಲಿ ಕಾಣಿಸದೇ ಇದ್ದು ಮಹಿಳೆಯರು ಹುಟ್ಟು ಗೂಢಚರರು ಎಂಬರ್ಥದ ವಾಕ್ಯಗಳನ್ನು ಚಿತ್ರದಲ್ಲಿ ಕೇಳಬಹುದು.
ಚಿತ್ರದುದ್ದಕ್ಕೂ ಕೇಳಿ ಬರುವ ಹಿನ್ನೆಲೆ ಸಂಗೀತವೂ ಕಿರಿಕಿರಿಯೆನಿಸುತ್ತದೆ.