ಸಿನಿ ಟ್ಯೂಬ್
Update: 2017-03-31 00:15 IST
ನಿಜಕ್ಕೂ ನಾವು ಯಾರು? ಈ ಪ್ರಶ್ನೆ ಬಹುಪಾಲು ಮಂದಿಗೆ ಎಷ್ಟೋ ಸಲ ಬಂದಿರುತ್ತದೆ. ಅದಕ್ಕೆ ಕಾರಣಗಳು ಹಲವು ಇರಬಹುದು, ಆದರೆ ಪ್ರಶ್ನೆ ಅದೇ. ಇದೇ ಪ್ರಶ್ನೆ ಇಟ್ಟುಕೊಂಡು ನಿರ್ಮಾಣವಾದ ಕಿರುಚಿತ್ರ ಸೆಲ್ಫೀ.. ಒಬ್ಬ ಸಾಮಾನ್ಯನ ಕಿರುಗಥೆ. ಸಮಾಜ ನಮ್ಮನ್ನು ಯಾವ ರೀತಿ ಗುರುತಿಸುತ್ತದೋ, ಅದನ್ನೇ ‘ನಾನು’ ಅಂದುಕೊಂಡಿರುತ್ತೇವೆ. ಅದರೆ, ನಿಜವಾಗಲೂ ನಾವು ಉಳಿದವರ ಕಾಣಿಕೆಯೇ? ನಮ್ಮತನ ಎಂಬುದಿಲ್ಲವೇ? ನಾವು ಹೇಗೆ ಕಾಣಿಸಿಕೊಳ್ಳುತ್ತೇವೆಯೋ ಅದೇ ನಮ್ಮತನವೇ? ನಮ್ಮ ನಿಜವಾದ ವ್ಯಕ್ತಿತ್ವ ಯಾವುದು? ನಮ್ಮ ಬಗ್ಗೆ ನಮಗೆಷ್ಟು ಗೊತ್ತು? ಎಂಬುದನ್ನು ಸೂಚ್ಯವಾಗಿ ತಿಳಿಸುವ ಕಿರುಚಿತ್ರ ಇದು. ರಾಮಚಂದ್ರ ಗಾಂವ್ಕರ್ ಎಂಬವರು ನಿರ್ದೇಶಿಸಿರುವ ಈ ಕಿರುಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡಲು ಈ ಲಿಂಕ್ ತೆರೆಯಿರಿ: https://goo.gl/OJSUT3