×
Ad

ಉತ್ತರಪ್ರದೇಶದಲ್ಲಿ ಪರೀಕ್ಷಾ ಅಕ್ರಮ: ಸಿಕ್ಕಿಬಿದ್ದವರಲ್ಲಿ ಹೆಚ್ಚು ಅಧ್ಯಾಪಕರು

Update: 2017-03-31 16:18 IST

 ಲಕ್ನೊ,ಮಾ. 31: ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಹೊಡೆಯುವುದು ಮುಂತಾದವುಗಳನ್ನು ಕಂಡುಹುಡುಕಲು ಅಧ್ಯಾಪಕರುಮತ್ತು ಇನ್ ವಿಜಿಲೇಟರ್(ಪರೀಕ್ಷಾ ನಿರೀಕ್ಷಕರು)ಗಳಿರುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗಿಂತಲೂ ಅಧ್ಯಾಪಕರೇ ಖಳನಾಯಕರಾಗಿದ್ದಾರೆ. ಈವರೆಗೆ ವಿವಿಧ ಪರೀಕ್ಷಾಕೇಂದ್ರಗಳಲ್ಲಿ 111 ಅಧೀಕ್ಷಕರು ಮತ್ತು 178 ಪರೀಕ್ಷಾ ನಿರೀಕ್ಷಕರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

 ನಕಲು ಹೊಡೆದ ವಿದ್ಯಾರ್ಥಿಗಳು ಸಿಕ್ಕಿಬೀಳುವುದಕ್ಕಿಂತ ಹೆಚ್ಚು ಅಧ್ಯಾಪಕರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರ ಲೆಕ್ಕ ವಿವರಿಸುತ್ತದೆ. ಅಂದರೆ ಪರೀಕ್ಷೆ ನಡೆಯುವಾಗ ಉತ್ತರ ಇರುವ ಪತ್ರಗಳನ್ನು ನೀಡುವುದು. ಉತ್ತರವನ್ನು ನೇರವಾಗಿ ಹೇಳಿಕೊಡುವುದು. ಉತ್ತರ ಪತ್ರಿಕೆಯನ್ನು ಪರೀಕ್ಷಾ ಹಾಲ್‌ನಿಂದ ಹೊರಕ್ಕೆ ಕೊಂಡು ಹೋಗಲು ಅನುಮತಿ ನೀಡುವುದು. ಬೇರೊಬ್ಬನಿಂದ ಉತ್ತರ ಬರೆಯಿಸುವುದು ಮುಂತಾದ ಅಕ್ರಮಗಳಲ್ಲಿ ಅಧ್ಯಾಪಕರು ಶಾಮೀಲಾಗಿದ್ದಾರೆ. ಅಕ್ರಮ ನಡೆಯುತ್ತಿದೆ ಎಂದು ಗೊತ್ತಾದ ಬಳಿಕ 327 ಪರೀಕ್ಷಾ ಕೇಂದ್ರಗಳ ಅಧೀಕ್ಷಕರುಗಳನ್ನು ಬದಲಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News