ಜಿನ್ನಾ ಹೌಸ್ ನಮಗೆ ಕೊಡಿ : ಪಾಕಿಸ್ತಾನ
ಮುಂಬೈ, ಎ. 1: ನಗರದ ಜಿನ್ನ ಹೌಸ್ ಒಡೆತನ ಹಕ್ಕು ನಮಗೆ ಬಿಟ್ಟು ಕೊಡಬೇಕೆಂದು ಕೇಂದ್ರ ಸರಕಾರವನ್ನು ಪಾಕಿಸ್ತಾನ ವಿನಂತಿಸಿದೆ. ವಿಭಜನೆಯ ಪ್ರತೀಕವಾದ ಜಿನ್ನ ಹೌಸನ್ನು ಕೆಡವಬೇಕೆಂದು ಬಿಜೆಪಿ ಶಾಸಕ ಮಂಗಲ್ ಲೋಧ ಆಗ್ರಹಿಸಿದ್ದನ್ನು ವಿಚಾರವನ್ನು ಗಮನಕ್ಕೆ ತಂದಾಗ ಪಾಕಿಸ್ತಾನದ ವಿದೇಶ ವಿಷಯಗಳ ವಕ್ತಾರ ನಫೀಸ್ ಝಕರಿಯ ಹೀಗೆ ಪ್ರತಿಕ್ರಿಯಿಸಿದ್ದಾರೆ. ಅವರು ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡುತ್ತಿದ್ದರು.
ನಮ್ಮ ರಾಷ್ಟ್ರ ಪಿತ ಬದುಕಿದ್ದ ಜಿನ್ನ ಹೌಸ್‌ನ್ನು ವಹಿಸಿಕೊಳ್ಳುವ ಆಗ್ರಹವನ್ನು ಬಹಳ ಹಿಂದೆಯೇ ಪ್ರಕಟಿಸಿದ್ದೇವೆ. ಪಾಕಿಸ್ತಾನದ ಒಡೆತನ ಹಕ್ಕನ್ನು ಭಾರತ ಗೌರವಿಸಬೇಕು. ಜಿನ್ನ ಹೌಸ್‌ನ್ನು ಭಾರತ ಸಂರಕ್ಷಿಸುತ್ತದೆ ಎಂದು ತಾನು ನಿರೀಕ್ಷಿಸುತ್ತೇನೆ ಎಂದು ನಫೀಸ್ ಝಕರಿಯ ಹೇಳಿದರು.
ಆದರೆ ಜಿನ್ನ ಹೌಸ್ ಒಡೆತನ ಯಾರದ್ದು ಎನ್ನುವ ವಿವಾದ ಬಗೆಹರಿದಿಲ್ಲ. ಪಾಕಿಸ್ತಾನ, ಮುಹಮ್ಮದಲಿ ಜಿನ್ನ ಪುತ್ರಿ ದಿನ ವಾಡಿಯ, ಸಹೋದರಿ ಮರಿಯಮ್‌ರ ಮೊಮ್ಮಕ್ಕಳು ಹಕ್ಕುವಾದವನ್ನು ಮಂಡಿಸಿದ್ದಾರೆ. 1939ರಲ್ಲಿ ಜಿನ್ನ ಸಹಿಹಾಕಿದ ಉಯಿಲು ಪ್ರಕಾರ ಇನ್ನೊಬ್ಬಳು ಸಹೋದರಿ ಫಾತಿಮಾರಿಗೆ ಜಿನ್ನಹೌಸ್‌ನ ಒಡೆತನ ಸೇರುತ್ತದೆ ಎಂದು ಭಾರತ ಸರಕಾರದ ನಿಲುವು ಆಗಿದೆ.