ರೈಲು ಟಿಕೆಟ್ ಆನ್ ಲೈನ್‌ಬುಕ್ಕಿಂಗ್‌ಗೆ ಜೂನ್ 30ರವರೆಗೆ ಸರ್ವಿಸ್ ಚಾರ್ಜ್ ಇಲ್ಲ
Update: 2017-04-01 13:35 IST
ಹೊಸದಿಲ್ಲಿ,ಎ.1: ಆನ್‌ಲೈನ್ ರೈಲು ಟಿಕೆಟ್ ಬುಕ್ಕಿಂಗ್‌ಗೆ ಜೂನ್ 30ರವರೆಗೆ ಸರ್ವಿಸ್ ಚಾರ್ಜು ವಿಧಿಸುವುದಿಲ್ಲ. ನೋಟು ನಿಷೇಧದ ನಂತರ ಡಿಜಿಟಲ್ ವ್ಯವಹಾರಗಳನ್ನು ಪ್ರೋತ್ಸಾಹಿಸುವುದಕ್ಕಗಿ ಆನ್‌ಲೈನ್ ಬುಕ್ಕಿಂಗ್‌ನ್ನುಮಾರ್ಚ್ 31ರವರೆಗೆ ಸರ್ವಿಸ್ ಚಾರ್ಜು ಮುಕ್ತವಾಗಿ ಮುಂದುವರಿಸಲಾಗಿತ್ತು.
ರಿಯಾಯಿತಿಯನ್ನುಮುಂದುವರಿಸಲು, ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸಲು ಮಾಹಿತಿತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. 2016 ನವೆಂಬರ್ 23ರಿಂದ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿದವರಿಗೆ ಸರ್ವಿಸ್‌ಚಾರ್ಜು ಕೈಬಿಡಲಾಗಿತ್ತು. ಈ ಮೊದಲು ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗೆ 20-40ರೂಪಾಯಿ ಸರ್ವಿಸ್ ಚಾರ್ಜು ವಿಧಿಸಲಾಗುತ್ತಿತ್ತು.