ಮೋಹನ್‌ಲಾಲ್ ಚಿತ್ರದಲ್ಲಿ ಬಿಗ್‌ಬಿ

Update: 2017-04-01 13:02 GMT

ಕಂದಹಾರ್ ಬಳಿಕ ಮೋಹನ್‌ಲಾಲ್ ಹಾಗೂ ಬಾಲಿವುಡ್‌ನ ಬಿಗ್ ಬಿಗ್ ಬಿ ಮತ್ತೊಮ್ಮೆ ಒಂದೇ ಬೆಳ್ಳಿಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಹೌದು, ಇವರಿಬ್ಬರೂ ವಿ.ಎ. ಶ್ರೀಕುಮಾರ್ ನಿರ್ದೇ ಶನದ ಭಾರೀ ಬಜೆಚ್‌ನ ಚಿತ್ರ ರಂಡಾಮೂಳಂ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ಪುರಾಣಕಾವ್ಯ ಮಹಾಭಾರತದ ಕುರುಕ್ಷೇತ್ರದ ಯುದ್ಧದ ಹಿನ್ನೆಲೆಯ ಕಥಾವಸ್ತುವನ್ನು ಒಳಗೊಂಡ ಈ ಚಿತ್ರದಲ್ಲಿ ಬಿಗ್ ಬಿ, ಭೀಷ್ಮ ಪಿತಾಮಹನ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ನಿರ್ದೇಶಕ ಶ್ರೀಕುಮಾರ್ ಅವರೇ ಸ್ವತಃ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮಲಯಾಳಂ ಚಿತ್ರರಂಗದ ಬಾಹುಬಲಿ ಎಂದೇ ಜನಪ್ರಿಯವಾಗಿ ‘ರಂಡಾಮೂಳಂ’ ಬರೋಬ್ಬರಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಮಲಯಾಳಂ ಸಿನೆಮಾರಂಗದಲ್ಲಿ 100 ಕೋಟಿ ರೂ. ಕ್ಲಬ್ ಪ್ರವೇಶಿಸಿದ ಚೊಚ್ಚಲ ಚಿತ್ರವೆಂಬ ಹೆಗ್ಗಳಿಕೆ ಪಡೆದಿರುವ ‘ಪುಲಿಮುರುಗನ್’ ಚಿತ್ರದಲ್ಲಿ ಮೋಹನ್‌ಲಾಲ್‌ರ ಸಾಹಸದೃಶ್ಯಗಳನ್ನು ನಿರ್ದೇಶಿಸಿದ್ದ ಹಾಲಿವುಡ್ ಸ್ಟಂಟ್ ಕಲಾವಿದ ಪೀಟರ್ ಹೇಯ್ನಿ , ‘ರಂಡಾಮೂಳಂ’ ಚಿತ್ರಕ್ಕೂ ಅತ್ಯದ್ಭುತವಾದ ಸಾಹಸ ದೃಶ್ಯಗಳನ್ನು ಸಂಯೋಜಿಸಲಿದ್ದಾರೆ.

ಆದರೆ ಈ ಮೆಗಾ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯಾ ರೈ ನಟಿಸಲಿದ್ದಾರೆಂಬ ಬಲವಾದ ಸುದ್ದಿಗಳು ಈ ಮೊದಲು ಕೇಳಿಬಂದಿದ್ದರೂ, ಇದೀಗ ನಿರ್ದೇಶಕ ಸುಕುಮಾರ್ ಅದನ್ನು ಅಲ್ಲಗಳೆದಿದ್ದಾರೆ. ಬಹುಭಾಷಾ ಚಿತ್ರಗಳ ಕಲಾವಿದ, ಕನ್ನಡಿಗ ಪ್ರಕಾಶ್‌ರಾಜ್ ಕೂಡಾ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮಂಜುವಾರಿಯರ್ ಕೂಡಾ ಅಭಿನಯಿಸುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ‘ರಂಡಾಮೂಳಂ’ ಚಿತ್ರೀಕರಣ ಆರಂಭಕ್ಕೆ ಮುನ್ನವೇ ಸಿನಿಪ್ರಿಯರನ್ನು ನಿರೀಕ್ಷೆಯ ಸಾಗರಕ್ಕೆ ದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News