×
Ad

ಎಮಿರೇಟ್ಸ್‌ನಿಂದ ಈಜುಕೊಳ, ಜಿಮ್, ಪಾರ್ಕ್ ಹೊಂದಿರುವ ವಿಶ್ವದ ಅತ್ಯಂತ ಬೃಹತ್ ವಿಮಾನ?

Update: 2017-04-02 00:15 IST

ದುಬೈ,ಎ.1: ದುಬೈನ ಎಮಿರೇಟ್ಸ್ ಏರ್‌ಲೈನ್ ಸಂಸ್ಥೆಯ ಮಾತುಗಳನ್ನು ನಂಬಬಹುದಾದರೆ ವಿಮಾನಯಾನ ಇತಿಹಾಸದಲ್ಲಿ ಹೊಸಯುಗವನ್ನು ಸೃಷ್ಟಿಸಲು ಅದು ಸಜ್ಜಾಗಿದೆ.

ವಿಶ್ವದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲೊಂದಾಗಿರುವ ಎಮಿರೇಟ್ಸ್ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ವಾಣಿಜ್ಯಿಕ ವಿಮಾನವನ್ನು ಪ್ರಯಾಣಿಕರ ಸೇವೆಗೆ ತೊಡಗಿಸುವ ತನ್ನ ಯೋಜನೆಯನ್ನು ಅನಾವರಣಗೊಳಿಸಿದ್ದು, ನಂಬಲು ಸಾಧ್ಯವಿಲ್ಲದ ಸೌಲಭ್ಯಗಳನ್ನು ಈ ವಿಮಾನವು ಹೊಂದಿರಲಿದೆ.

ವಿಶ್ವದ ಅತ್ಯಂತ ದೊಡ್ಡ ವಾಣಿಜ್ಯಿಕ ವಿಮಾನವೆಂಬ ಹೆಗ್ಗಳಿಕೆಯ ಟ್ರಿಪಲ್ ಡೆಕರ್ ‘ಎಪಿಆರ್001’ ಯಾನವನ್ನು ಆರಂಭಿಸುವುದಾಗಿ ಎಮಿರೇಟ್ಸ್ ಶುಕ್ರವಾರ ಮಧ್ಯರಾತ್ರಿ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು, ಈ ವಿಮಾನವು ಈಜುಕೊಳ, ಜಿಮ್ ಮತ್ತು ಉದ್ಯಾನವನವನ್ನು ಒಳಗೊಂಡಿರಲಿದೆ!

ಆದರೆ ಅತ್ಯಂತ ಐಷಾರಾಮಿಯನ್ನು ಬಯಸುವ ಉತ್ಸಾಹಿ ಪ್ರಯಾಣಿಕರು ಇಂತಹ ವಿಮಾನಯಾನಕ್ಕಾಗಿ ಕಾಯಬೇಕಾಗುತ್ತದೆ. ಏಕೆಂದರೆ ಎಮಿರೇಟ್ಸ್‌ನ ಶುಕ್ರವಾರ ಮಧ್ಯರಾತ್ರಿಯ ಈ ಪ್ರಕಟಣೆ ‘ಎಪ್ರಿಲ್ ಫೂಲ್ ’ಚೇಷ್ಟೆಯಾಗಿದೆ ಎನ್ನಲಾಗಿದೆ. ಆದರೆ ವಾಯುಯಾನದ ಭವಿಷ್ಯದ ಗರ್ಭದಲ್ಲಿ ಏನು ಅಡಗಿದೆ ಎನ್ನುವುದು ಯಾರಿಗೆ ಗೊತ್ತು? ಇಂತಹ ವಿಮಾನ ಬಂದರೂ ಬರಬಹುದು. ಅಲ್ಲಿಯವರೆಗೆ ಪ್ರಯಾಣಿಕರು ಎಮಿರೇಟ್ಸ್‌ನ ಹಾಲಿ ಯಾನಗಳಲ್ಲಿಯ ವಿಶ್ವದರ್ಜೆ ಸೌಲಭ್ಯಗಳನ್ನು ಹಾಯಾಗಿ ಅನುಭವಿಸುತ್ತಿರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News