ಪ್ರಿಯಾಂಕಾ ಚೋಪ್ರಾಗೆ ಇನ್ನೊಂದು ಜಾಗತಿಕ ಗೌರವ

Update: 2017-04-03 10:53 GMT

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ದಿನೇದಿನೇ ಪ್ರಸಿದ್ಧವಾಗುತ್ತಲೇ ಇದ್ದು, ಇದಕ್ಕೆ ಯಾವುದೇ ಮಿತಿ ಸದ್ಯಕ್ಕಂತೂ ಕಂಡು ಬರುತ್ತಿಲ್ಲ. ಅಮೆರಿಕದಲ್ಲಿ ಎಬಿಸಿಯ ಟಿವಿ ಶೋ ಕ್ವಾಂಟಿಕೊದಲ್ಲಿ ಅಲೆಕ್ಸ ಪ್ಯಾರಿಷ್ ಪಾತ್ರ ನಿರ್ವಹಿಸುವುದರೊಡನೆ ಜಾಗತಿಕವಾಗಿ ಹೆಸರು ಮಾಡಿದ ಪ್ರಿಯಾಂಕಾ ಭಾರತಕ್ಕೆ ಹೆಮ್ಮೆಯನ್ನು ತಂದಿದ್ದಾರೆ.

ಇತ್ತೀಚಿಗೆ ಬಝ್‌ನೆಟ್ ಪ್ರಿಯಾಂಕಾರನ್ನು 2017ನೇ ಸಾಲಿನ ವಿಶ್ವದ 30 ಅತ್ಯಂತ ಸುಂದರ ಮಹಿಳೆಯರ ಪಟ್ಟಿಗೆ ಸೇರಿಸುವ ಮೂಲಕ ಅವರನ್ನು ಗೌರವಿಸಿದೆ. ಪ್ರಿಯಾಂಕಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಮೊದಲ ಸ್ಥಾನ ಬಿಯೊನ್ಸೆ ಪಾಲಾಗಿದೆ. ಬಿಯೊನ್ಸೆ ಮೊದಲ ಸ್ಥಾನಕ್ಕೆ ಅರ್ಹರು ಎಂದು ಸ್ವತಃ ಪ್ರಿಯಾಂಕಾ ಟ್ವಿಟರ್‌ನಲ್ಲಿ ಪ್ರಶಂಸಿಸಿದ್ದಾರೆ. ಏಂಜಲೀನಾ ಜೋಲಿ, ಎಮ್ಮಾ ಸ್ಟೋನ್, ಎಮ್ಮಾ ವಾಟ್ಸನ್, ಮಾರ್ಗಟ್ ರಾಬ್ಬೀ, ಬ್ಲೇಕ್ ಲಿವ್ಲಿ ಮತ್ತು ಅಲಿಸಿಯಾ ವಿಕಂಡರ್ ಅವರಂತಹ ಹಾಲಿವುಡ್ ಸುಂದರಿಯರನ್ನು ಹಿಂದಿಕ್ಕಿ ಪ್ರಿಯಾಂಕಾ ವಿಜಯದ ನಗೆ ಬೀರಿದ್ದಾರೆ. ಸೂಪರ್ ಮಾಡೆಲ್ ಗೀಗಿ ಹದಿದ್,ಮಿಷೆಲ್ ಒಬಾಮಾ ಮತ್ತು ಹಿಲರಿ ಕ್ಲಿಂಟನ್ ಅವರೂ ಈ ಪಟ್ಟಿಯಲ್ಲಿ ಸ್ಥಾನಗಳನ್ನು ಪಡೆದಿದ್ದಾರೆ.

ಪ್ರಿಯಾಂಕಾ ಹಾಲಿವುಡ್ ರಂಗ ಪ್ರವೇಶಕ್ಕೆ ಸುದೀರ್ಘ ಕಾಲದಿಂದಲೂ ಕಾಯುತ್ತಿದ್ದು, ಸೇಥ್ ಗೋರ್ಡನ್ ನಿರ್ದೇಶನದ ಬೇವಾಚ್‌ನೊಂದಿಗೆ ಶೀಘ್ರವೇ ಈ ಕನಸು ನನಸಾಗಲಿದೆ. ಇದು ಪ್ರಸಿದ್ಧ ಟಿವಿ ಶೋ ಬೇವಾಚ್‌ನ ರಿಮೇಕ್ ಆಗಿದ್ದು,ಡ್ವಾಯ್ನಾ ಜಾನ್ಸನ್,ಝಾಕ್ ಎಫ್ರಾನ್, ಅಲೆಕ್ಸಾಂಡ್ರಾ ದಡಾರಿಯೊ ಮತ್ತಿತರರು ತಾರಾಗಣ ದಲ್ಲಿದ್ದಾರೆ. ಚಿತ್ರವು ಮೇ 26ರಂದು ಅಮೆರಿಕದಲ್ಲಿ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News