ಒಂದೇ ಶಾಲಿನಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು
ತಿರುವನಂತಪುರಂ, ಎ.5: ಪ್ಲಸ್‌ಟು(ದ್ವಿತೀಯ ಪಿಯುಸಿ) ವಿದ್ಯಾರ್ಥಿಗಳಾದ ಇಬ್ಬರು ವಿದ್ಯಾರ್ಥಿಗಳು ಶಾಲಿನಲ್ಲಿ ನೇಣುಹಾಕಿಕೊಂಡು ಸತ್ತ ಘಟನೆ ನಡೆದಿದೆ. ಇಬ್ಬರೂ ಪ್ರೇಮಿಗಳಾಗಿದ್ದು, ನೇಣಿಗೆ ಶರಣಾದವರನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಶಿಕಾ, ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ ದೀಪ್ ಎಂದು ಗುರುತಿಸಲಾಗಿದೆ.
ಇಬ್ಬರೂ ಕಾಂಙಿರ ಕುಳಂ ಪಿ.ಕೆ.ಎಸ್ ಹೈಯರ್ ಸೆಕಂಡರಿ ಸ್ಕೂಲ್ ವಿದ್ಯಾರ್ಥಿಗಳಾಗಿದ್ದಾರೆ. ಇನ್ನೇ ನು ಇವರಿಬ್ಬರ ಪರೀಕ್ಷೆಫಲಿತಾಂಶ ಪ್ರಕಟವಾಗಲಿಕ್ಕಿದೆ ಎನ್ನುವಾಗ ಇಬ್ಬರು ದುಡುಕಿ ಆತ್ಮಹತ್ಯೆಗೆ ಶರಣಾದರು. ಆಶಿಕಾಳ ಅಜ್ಜಿ ಮನೆಯಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಮನೆಯಲ್ಲಿ ಯಾರೂವಾಸವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಇಬ್ಬರು ಕಾಣೆಯಾಗಿದ್ದರು. ಇವರ ನಾಪತ್ತೆಯ ದೂರು ಪೊಲೀಸರು ದಾಖಲಿಸಿದ್ದರು.ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಮನೆಯಲ್ಲಿಯೂ ಇದನ್ನುವಿರೋಧಿಸಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಆದರೆ ಇದು ಸಂಪೂರ್ಣ ದೃಢವಾಗಿಲ್ಲ. ಘಟನೆ ನಿಗೂಢವಾಗಿದೆ ಎಂದು ಆಕ್ಷೇಪ ಕೇಳಿಬಂದಿದೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು ತನಿಖೆ ನಡೆಸುತ್ತಿದ್ದಾರೆ.