ಕೊಲಂಬಿಯ ಭೂಕುಸಿತ: ಮೃತರ ಸಂಖ್ಯೆ 290ಕ್ಕೆ

Update: 2017-04-05 15:17 GMT

ಮೊಕೋ (ಕೊಲಂಬಿಯ), ಎ. 5: ದಕ್ಷಿಣ ಕೊಲಂಬಿಯದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 290ಕ್ಕೆ ಏರಿದೆ.

ಶುಕ್ರವಾರ ಸಂಭವಿಸಿದ ದುರಂತದಲ್ಲಿ 332 ಮಂದಿ ಗಾಯಗೊಂಡಿದ್ದಾರೆ.

ಹಲವು ದಿನಗಳ ಕಾಲ ಭಾರೀ ಮಳೆ ಸುರಿದ ಬಳಿಕ ಸ್ಥಳೀಯ ನದಿಗಳಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಕಾಣಿಸಿಕೊಂಡಿತ್ತು. ಪ್ರವಾಹದೊಂದಿಗೆ ಬಂದ ಕಲ್ಲು, ಮಣ್ಣು ಮತ್ತು ಮರಗಳು ಮನೆಗಳನ್ನು ನೆಲಸಮಗೊಳಿಸಿದವು.

ಮೊಕೋ ಪಟ್ಟಣದಲ್ಲಿ ಸುಮಾರು 70,000 ಜನರು ವಾಸಿಸುತ್ತಿದ್ದು, ಸುಮಾರು 45,000 ಮಂದಿ ಪ್ರವಾಹ ಪೀಡಿತರಾಗಿದ್ದಾರೆ ಎಂದು ರೆಡ್‌ಕ್ರಾಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News