ಕೊನೆಗೂ ವಿಮಾನ ಹತ್ತಿದ ಶಿವಸೇನಾ ಸಂಸದ
Update: 2017-04-05 21:34 IST
ಹೊಸದಿಲ್ಲಿ,ಎ.5: ಸುಮಾರು ಎರಡು ವಾರಗಳ ಹಿಂದೆ ಪ್ರಯಾಣದ ಸಂದರ್ಭದಲ್ಲಿ ಬಿಸಿನೆಸ್ ಕ್ಲಾಸ್ ಸೀಟ್‌ಗೆ ಸಂಬಂಧಿಸಿದಂತೆ ಏರ್ ಇಂಡಿಯಾದ ಹಿರಿಯ ಮ್ಯಾನೇಜರ್‌ಗೆ ಹಲ್ಲೆ ನಡೆಸಿ ದೇಶಿಯ ವಿಮಾನಯಾನ ಸಂಸ್ಥೆಗಳ ನಿಷೇಧಕ್ಕೊಳಗಾಗಿರುವ ಶಿವಸೇನೆಯ ಸಂಸದ ರವೀಂದ್ರ ಗಾಯಕವಾಡ್ ಅವರು ಕೊನೆಗೂ ವಿಮಾನವೊಂದನ್ನು ಹತ್ತುವಲ್ಲಿ ಸಫಲರಾಗಿದ್ದಾರೆ. ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಬಾಡಿಗೆ ವಿಮಾನವೊಂದರಲ್ಲಿ ಅವರು ದಿಲ್ಲಿಗೆ ಪ್ರಯಾಣಿಸಿದರು.
ಏರ್ ಇಂಡಿಯಾದ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದ ಗಾಯಕವಾಡ್, ಬಳಿಕ ‘ತಾನು ಆತನನ್ನು 25 ಬಾರಿ ಚಪ್ಪಲಿಯಿಂದ ಥಳಿಸಿದ್ದೆ ’ಎಂದು ಕೊಚ್ಚಿಕೊಂಡಿದ್ದರು.
ನಡೆದಿದ್ದ ಘಟನೆಯ ಬಗ್ಗೆ ಗಾಯಕವಾಡ್ ತನ್ನ ಹೇಳಿಕೆಯನ್ನು ಲೋಕಸಭೆಯ ಮುಂದಿಡುವ ನಿರೀಕ್ಷೆಯಿದೆ ಎಂದು ಅವರ ನಿಕಟವರ್ತಿ ಮೂಲವೊಂದು ತಿಳಿಸಿದೆ.