ಥಗ್ಸ್ ಆಫ್ ಹಿಂದೊಸ್ತಾನ್ ನಲ್ಲಿ ಹೀರೋಯಿನ್ ಖಾನ್ !

Update: 2017-04-05 16:48 GMT

ಮುಂಬೈ, ಎ . 5 : ದಂಗಲ್ ಸೂಪರ್ ಡೂಪರ್ ಹಿಟ್ ಆದ ಬಳಿಕ ಆಮಿರ್ ಖಾನ್ ನಟಿಸುತ್ತಿರುವ ಹೊಸ ಚಿತ್ರ ಥಗ್ಸ್ ಆಫ್ ಹಿಂದೊಸ್ತಾನ್ ಭಾರೀ ಚರ್ಚೆಯಲ್ಲಿದೆ . ಆಮಿರ್ ನಟನೆಯ ಚಿತ್ರ ಎಂದ ಮೇಲೆ ಚರ್ಚೆ , ಭಾರೀ ನಿರೀಕ್ಷೆ ಸಹಜ. ಸಾಲದ್ದಕ್ಕೆ ಈ ಚಿತ್ರದಲ್ಲಿ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಬೇರೆ ಆಮಿರ್ ಗೆ ಸಾಥ್ ನೀಡುತ್ತಿದ್ದಾರೆ. ಇನ್ನು ಹೇಳಬೇಕೆ  ? 

ಆದರೆ ಈಗ ಈ ಚಿತ್ರ ಬೇರೆಯದೇ ಕಾರಣಕ್ಕೆ ಬಿಸಿ ಬಿಸಿ ಚರ್ಚೆಯಲ್ಲಿದೆ. ಇದಕ್ಕೆ ಕಾರಣ ಚಿತ್ರದ ಹೀರೋಯಿನ್ . ಆಮಿರ್ ಎದುರು ಈ ಚಿತ್ರದಲ್ಲಿ ಪ್ರಮುಖ ಸ್ತ್ರೀ ಪಾತ್ರಧಾರಿಣಿ ಯಾರು ಎಂಬುದು ಬಾಲಿವುಡ್ ನಲ್ಲಿ ಹಲವು ವದಂತಿಗಳಿಗೆ ಕಾರಣವಾಗಿತ್ತು. ದಂಗಲ್ ನಲ್ಲಿ ಆಮಿರ್ ಪುತ್ರಿ ಗೀತಾ ಪಾತ್ರದಲ್ಲಿ ಮಿಂಚಿದ ಫಾತಿಮಾ ಸನಾ ಶೇಖ್ ರನ್ನೇ ಇಲ್ಲಿ ತರಬೇಕು ಎಂಬುದು ಆಮಿರ್ ಬಯಕೆ ಎಂದು ಹೇಳಲಾಗಿತ್ತು . ಆದರೆ ಈಗ ಬೇರೆಯದೇ ಸುದ್ದಿ ಬರುತ್ತಿದೆ . 
ಫಿಲ್ಮ್ ಫೇರ್ ವರದಿಯ ಪ್ರಕಾರ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ  ಈ ಚಿತ್ರದ ಮೂಲಕ ಖಾನ್ ಹೀರೋಯಿನ್ ಪಾದಾರ್ಪಣೆ ಆಗುತ್ತಿದೆ ! ಸೈಫ್ ಅಲಿ ಖಾನ್ ಹಾಗು ಅಮೃತ ಸಿಂಗ್ ಅವರ ಪುತ್ರಿ ಸರಾ ಅಲಿ ಖಾನ್ ಆಮಿರ್ ಎದುರು ನಟಿಸುವ ಮೂಲಕ ಬಾಲಿವುಡ್ ಗೆ ಭರ್ಜರಿ ಎಂಟ್ರಿ ಮಾಡಲಿದ್ದಾರೆ ಎಂದು ಫಿಲ್ಮ್ ಫೇರ್ ವರದಿ ಮಾಡಿದೆ . ಇದು ನಿಜವಾದರೆ ಯಾವುದೇ ನಟಿ ಬಯಸುವ ಬಾಲಿವುಡ್ ನ ಅತಿ ಪ್ರತಿಷ್ಠಿತ ಸ್ಟಾರ್ ಎದುರು ನಟಿಸುವ ಭಾಗ್ಯ ಸಾರಾ ಗೆ ಮೊದಲ ಚಿತ್ರದಲ್ಲೇ ಸಿಗಲಿದೆ. ಯಾವುದಕ್ಕೂ ಕಾದು ನೋಡೋಣ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News