×
Ad

‘ಗ್ರೀನ್ ಏಮ್ಸ್’ ಯೋಜನೆ ಅನುಷ್ಠಾನಕ್ಕೆ

Update: 2017-04-07 11:34 IST

ಬೆಂಗಳೂರು, ಎ.7: ಹೊಸದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯಲ್ಲಿ ವಿದ್ಯುತ್ ಉಳಿತಾಯದ ಪರಿಸರ ಸ್ನೇಹಿ ಯೋಜನೆಯನ್ನು ಇಂಧನ ಉಳಿತಾಯದ ದೀಪಗಳ ಕ್ಷೇತ್ರದಲ್ಲಿರುವ ಹಿಟಾಚಿ ಇಂಡಿಯಾ ಪ್ರೈ.ಲಿ. ಅನುಷ್ಠಾನಗೊಳಿಸಲಿದೆ.

ನ್ಯೂ ಎನರ್ಜಿ ಆ್ಯಂಡ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಡೆಲವಪ್‌ಮೆಂಟ್ ಆರ್ಗನೈಸೇಷನ್ (ನೆಡೊ ಡೆಪಾರ್ಟ್‌ಮೆಂಟ್) ಮೂಲಕ ‘ಹಸಿರು ಆಸ್ಪತ್ರೆ ಪ್ರದರ್ಶನ ಯೋಜನೆ’ ಜಾರಿಗೆ ಬರಲಿದೆ. 2017ರಿಂದ 2020ರ ಮಾರ್ಚ್‌ವರೆಗೆ ಈ ಯೋಜನೆ ಅನುಷ್ಠಾನದಲ್ಲಿರುತ್ತದೆ. ಈ ಅವಧಿಯಲ್ಲಿ ಹಿಟಾಚಿ ಕಂಪೆನಿ ಏಮ್ಸ್‌ನಲ್ಲಿ 2014ರ ಆರ್ಥಿಕ ವರ್ಷದಲ್ಲಿ ಬಳಕೆಯಾದ ವಿದ್ಯುತ್ತಿನ ಪ್ರಮಾಣದಲ್ಲಿ ಶೇ.30ರಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲಿದೆ. ಇದಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಆಧಾರಿತ ಮೂಲಸೌಕರ್ಯವನ್ನೂ ಕಂಪೆನಿ ನಿರ್ಮಿಸಲಿದೆ. ಇದರಿಂದಾಗಿ ಆಸ್ಪತ್ರೆಯ ಒಟ್ಟಾರೆ ಕಾರ್ಯಚಟುವಟಿಕೆಗಳಲ್ಲಿ ಸುಧಾರಣೆ ಕಂಡುಬರಲಿದೆ.

ಯೋಜನೆಯನ್ವಯ ಹಿಟಾಚಿ ಹೊಸ ದ್ಯುತಿ ವಿದ್ಯುಜ್ಜನಕ ವಿದ್ಯುತ್ ಉತ್ಪಾದನಾ ಸೌಲಭ್ಯವನ್ನು ಅನುಷ್ಠಾನಗೊಳಿಸಲಿದೆ. ಅಧಿಕ ಕ್ಷಮತೆಯ ಲೈಟಿಂಗ್ ಗಳ ನವೀಕರಣ, ಸಂಪನ್ಮೂಲ ಬಳಕೆಯ ನಿಯಂತ್ರಣ, ಹಿಟಾಚಿಯ ಶಕ್ತಿ ಉಳಿತಾಯದ ಐಟಿ ಸಲಕರಣೆಗಳನ್ನು ಬಳಸಲಾಗುವುದು. ಇದರಿಂದ ‘ಗ್ರೀನ್ ಏಮ್ಸ್’ ಪರಿಕಲ್ಪನೆ ಕಾರ್ಯರೂಪಕ್ಕೆ ಬರಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News