ಕದ್ದ ವಸ್ತುಗಳನ್ನು ಬಚ್ಚಿಡಲು ಬಳಸಲಾಗುತ್ತಿದ್ದ ಗುಹೆ ಪತ್ತೆ
ಹೊಸದಿಲ್ಲಿ, ಎ.7: ದಕ್ಷಿಣ ದಿಲ್ಲಿಯ ಮೋತಿ ಬಾಗ್ ಪ್ರದೇಶದಲ್ಲಿ ಪಾತಕಿಗಳು ತಾವು ಕದ್ದು ತಂದ ವಸ್ತುಗಳನ್ನು ಬಚ್ಚಿಡಲು ಬಳಸಲಾಗುತ್ತಿದ್ದ 50 ಮೀಟರ್ ಉದ್ದದ ಗುಹೆಯೊಂದ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮೋತಿ ಬಾಗ್ ಪಾರ್ಟ್ 1 ಪ್ರದೇಶದಲ್ಲಿರುವ ಸ್ಮತಿ ವಾಟಿಕಾ ಪಾರ್ಕ್ ಬಳಿಯ ಅರಣ್ಯಪ್ರದೇಶದಲ್ಲಿ ಈ ಗುಹೆ ಪತ್ತೆಯಾಗಿದೆ. ಇದಕ್ಕೆ ಕಿರಿದಾದ ಎರಡು ಪ್ರವೇಶ ದ್ವಾರಗಳಿವೆ. ಇದರ ಒಳಭಾಗದಲ್ಲಿ ವಿಶಾಲವಾಗಿದ್ದು ಇಲ್ಲಿ ಬಚ್ಚಿಡಲಾಗಿದ್ದ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಟಿವಿ ಸೆಟ್‌ಗಳು, ಬೆಲೆಬಾಳುವ ಕೈಗಡಿಯಾರ ಮುಂತಾದ ವಸ್ತುಗಳ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಗುಹೆಯ ಒಳಭಾಗದಲ್ಲಿ ಸುಮಾರು 6 ಮಂದಿ ಆರಾಮವಾಗಿ ಮಲಗುವ ಸ್ಥಳಾವಕಾಶವಿದೆ. ಇಲ್ಲಿ ಕತ್ತಲು ಆವರಿಸಿರುವ ಕಾರಣ ಪೊಲೀಸರ ಕಣ್ತಪ್ಪಿಸಿ ತಮ್ಮ ಕಾರ್ಯ ಮುಂದುವರಿಸಲು ಚೋರರಿಗೆ ಸುಲಭವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಪೊಲೀಸರ ಬಲೆಗೆ ಬಿದ್ದಿದ್ದ ಆರು ಮಂದಿ ಚೋರರ ವಿಚಾರಣೆ ವೇಳೆ ಅವರು ಈ ಗುಹೆಯ ಬಗ್ಗೆ ಮಾಹಿತಿ ನೀಡಿದ್ದರು. ಗುಹೆಯನ್ನು ಪ್ರವೇಶಿಸಲು ಕಳ್ಳರು ಟಾರ್ಚ್ ಲೈಟ್ ಬಳಸುತ್ತಿದ್ದರು ಹಾಗೂ ತಲೆಮರೆಸಿಕೊಂಡು ಇರಬೇಕಾದ ಸಂದರ್ಭ ತಮ್ಮ ಅಗತ್ಯಕ್ಕೆ ಸಾಕಾಗುವಷ್ಟು ಅಗತ್ಯ ವಸ್ತುಗಳನ್ನೂ ಇಲ್ಲಿ ಶೇಖರಿಸಿಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.