×
Ad

ಗೋರಕ್ಷಕರನ್ನು ಯಾಕೆ ನಿಷೇಧಿಸಬಾರದು : ಸುಪ್ರೀಂ ಪ್ರಶ್ನೆ

Update: 2017-04-08 10:56 IST

ಹೊಸದಿಲ್ಲಿ, ಎ.8: ಸ್ವಯಂ ಘೋಷಿತ ಗೋರಕ್ಷಕರು ಸುಪ್ರೀಂ ಕೋರ್ಟ್‌‌ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೇಶದಲ್ಲಿ ಗೋರಕ್ಷಣೆಯ ಹೆಸರಲ್ಲಿ ಅಶಾಂತಿಯನ್ನುಟು ಮಾಡುತ್ತಿರುವ ಗೋರಕ್ಷಕರ ವಿರುದ್ಧ ಯಾಕೆ ನಿಷೇಧ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರ ಮತ್ತು ಆರು ರಾಜ್ಯಗಳ ಸರಕಾರವನ್ನು ಪ್ರಶ್ನಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ  ಸುಪ್ರೀಂ ಕೋರ್ಟ್‌‌ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎನ್‌.ಖಾನ್ವಿಲ್ಕರ‍್ ಮತ್ತು ಎಂ.ಎಂ. ಶಾಂತನಗೌಡರ‍್ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಶುಕ್ರವಾರ  ಕೇಂದ್ರ ಸರಕಾರ ,  ಗುಜರಾತ್‌, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ಜಾರ್ಖಂಡ್‌ ರಾಜ್ಯಗಳಿಗೆ  ನಿರ್ದೇಶನ ನೀಡಿ ಈ ಬಗ್ಗೆ ಮೂರು ವಾರಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಿದೆ.
ಗೋಸಾಗಾಟ ಮಾಡುವವರ ವಿರುದ್ಧ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ವಯಂಘೋಷಿತ ಗೋರಕ್ಷಕರನ್ನು ನಿ಼ಷೇಧಿಸುವಂತೆ ವಕೀಲರ ತಂಡವೊಂದು ಸುಪ್ರೀಂ ಕೋರ್ಟ್‌‌ಗೆ ಅರ್ಜಿ ಸಲ್ಲಿಸಿತ್ತು.
ರಾಜಸ್ಥಾನದ ಅಲ್ವಾರ್ ನಲ್ಲಿ ರೈತ ಪೆಹ್ಲು ಖಾನ್‌ ರನ್ನು ಸ್ವಯಂ ಘೋಷಿತ ಗೋರಕ್ಷಕರು ಹಲ್ಲೆ ನಡೆಸಿ ಅವರನ್ನು ಸಾಯಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಲಯವು ಗೋರಕ್ಷಕರ ವಿಚಾರದಲ್ಲಿ ಕೇಂದ್ರಕ್ಕೆ ಕಡಕ್‌ ಆದೇಶ ನೀಡಿದೆ.
ಹಿರಿಯ ವಕೀಲರಾದ ಸಂಜಯ್‌ ಹೆಗ್ಡೆ  ನ್ಯಾಯಾಲಯದ ಮುಂದೆ ವಾದ ಮಂಡಿಸಿ ಸ್ವಯಂಘೋಷಿತ ಗೋರಕ್ಷಕರು  ಕಾನೂನನ್ನು ಕೈಗೆತ್ತಿಕೊಂಡು ಗೋರಕ್ಷಣೆಯ ಹೆಸರಲ್ಲಿ ಸಮಾಜದಲ್ಲಿ ಅಶಾಂತಿಯನ್ನುಟು ಮಾಡುವ ಪ್ರಕರಣವನ್ನು ತಡೆಯಲು ಕೇಂದ್ರ ಮತ್ತು ಆರು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ   ನ್ಯಾಯಪೀಠಕ್ಕೆ ಮನವಿ ಮಾಡಿದರು.
’ಗೋರಕ್ಷಕ ದಳ’ ಕಾನೂನುಬಾಹಿರ ಕೃತ್ಯದಲ್ಲಿ ನಿರತವಾಗಿದೆ. ಸಮಾಜದಲ್ಲಿ ಅಶಾಂತಿಯನ್ನು ಮಾಡುತ್ತಿರುವ ಸಮಜಘಾತಕ ಶಕ್ತಿಗಳು ಗೋರಕ್ಷಣೆಯ ಸೋಗಿನಲ್ಲಿ ದಲಿತರು  ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಸಂಜಯ್‌ ಹೆಗ್ಡೆ ನ್ಯಾಯಪೀಠದ ಗಮನ ಸೆಳೆದರು.
"ಸಮಸ್ಯೆ ಇರುವುದು ಕೇಂದ್ರ ಸರಕಾರ ಮಟ್ಟದಲ್ಲಿ ಅಲ್ಲ. ವಿವಿಧ ರಾಜ್ಯಗಳು ಗೋರಕ್ಷಕರಿಗೆ ರಕ್ಷಣೆ ನೀಡುತ್ತಿದೆ. ರಾಜ್ಯ ಸರಕಾರಗಳ ಕಾನೂನುಗಳು ಇವರ ರಕ್ಷಣೆಗೆ ಪೂರಕವಾಗಿದೆ.  ಇಂತಹ ಘಟನೆಗಳು ಮರುಕಳಿಸುವುದನ್ನು ನಾವು ತಡೆಯಬೇಕಾಗಿದೆ. ರಾಜಸ್ಥಾನ ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಅಫಿಡಾವಿಟ್‌ ಸಲ್ಲಿಸಲು ಆದೇಶ ನೀಡುವಂತೆ ವಕೀಲ ಹೆಗ್ಡೆ ಸುಪ್ರಿಂಗೆ ಮನವಿ ಮಾಡಿದರು. 

ಗೋರಕ್ಷಣೆಯ ಹೆಸರಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿ ಅಶಾಂತಿಯ  ವಾತಾವರಣ   ಸೃಷ್ಟಿಸುವ ಸ್ವಯಂ ಘೋಷಿತ ಗೋರಕ್ಷಕ ದಳವನ್ನು ನಿಷೇಧಿಸುವಂತೆ   ಕಾಂಗ್ರೆಸ್‌ ನಾಯಕ ತೇಹ್ಸಿನ್‌ ಪೂನಾವಾಲಾ ಅವರು ಸುಪ್ರೀಂ ಕೋರ್ಟ್‌ಗೆ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. .
"ಸಮಸ್ಯೆ ಇರುವುದು ಕೇಂದ್ರ ಸರಕಾರ ಮಟ್ಟದಲ್ಲಿ ಅಲ್ಲ. ವಿವಿಧ ರಾಜ್ಯಗಳು ಗೋರಕ್ಷಕರಿಗೆ ರಕ್ಷಣೆ ನೀಡುತ್ತಿದೆ. ರಾಜ್ಯ ಸರಕಾರಗಳ ಕಾನೂನುಗಳು ಇವರ ರಕ್ಷಣೆಗೆ ಪೂರಕವಾಗಿದೆ.  ಇಂತಹ ಘಟನೆಗಳು ಮರುಕಳಿಸುವುದನ್ನು ನಾವು ತಡೆಯಬೇಕಾಗಿದೆ. ರಾಜಸ್ಥಾನ ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಅಫಿಡಾವಿಟ್‌ ಸಲ್ಲಿಸಲು ಆದೇಶ ನೀಡುವಂತೆ ವಕೀಲ ಹೆಗ್ಡೆ ಸುಪ್ರಿಂಗೆ ಮನವಿ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News