​ಪಾಕ್‌ನಲ್ಲಿ ದಂಗಲ್ ಬಿಡುಗಡೆಗೆ ನಕಾರ ; ಆಮಿರ್‌ಗೆ ಮಹಾರಾಷ್ಟ್ರ ಸರಕಾರದ ಅಭಿನಂದನೆ

Update: 2017-04-08 08:10 GMT

ಮುಂಬೈ, ಎ.8: ಪಾಕಿಸ್ತಾನದಲ್ಲಿ ದಂಗಲ್ ಚಿತ್ರ ಬಿಡುಗಡೆ ಮಾಡದಿರುವ ನಿರ್ಧಾರ ಕೈಗೊಂಡಿರುವ ಬಾಲಿವುಡ್ ನಟ ಆಮಿರ್ ಖಾನ್ ಅವರನ್ನು ಮಹಾರಾಷ್ಟ್ರ ಸರಕಾರ ಅಭಿನಂದಿಸಿದೆ.
   ಭಾರತದ ರಾಷ್ಟ್ರಗೀತೆ ಇಲ್ಲದ ದಂಗಲ್ ಚಿತ್ರವನ್ನು ಪಾಕ್‌ನಲ್ಲಿ ಬಿಡುಗಡೆ ಮಾಡಲು ಸಮ್ಮತಿ ನೀಡದ ಆಮಿರ್ ಖಾನ್ ಅವರನ್ನು ಅಭಿನಂದಿಸಿ ಶುಕ್ರವಾರ ಮಹಾರಾಷ್ಟ್ರ ಸರಕಾರವು ನಿರ್ಣಯ ಅಂಗೀಕರಿಸಿದೆ.
ವಿಪಕ್ಷ ನಾಯಕ ಧನಂಜಯ್ ಮುಂಢೆ ಈ ಬಗ್ಗೆ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು.
 ಪಾಕಿಸ್ತಾನದ ಸೆನ್ಸಾರ್ ಮಂಡಳಿಯು ಭಾರತದ ರಾಷ್ಟ್ರಧ್ವಜ ಮತ್ತು ಭಾರತದ ರಾಷ್ಟ್ರಗೀತೆಯನ್ನು ದಂಗಲ್ ಚಿತ್ರದಿಂದ ತೆಗೆದು ಹಾಕಿ ಪಾಕ್‌ನಲ್ಲಿ ದಂಗಲ್ ಚಿತ್ರ ಬಿಡುಗಡೆಗೆ ಬಾಲಿವುಡ್ ನಟ ಹಾಗೂ ನಿರ್ಮಾಪಕ ಆಮಿರ್ ಖಾನ್‌ಗೆ ಅನುಮತಿ ನೀಡಿತ್ತು. ಆದರೆ ಭಾರತದ ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆ ಇಲ್ಲದ ಚಿತ್ರ ಬಿಡುಗಡೆಗೆ ಆಮಿರ್‌ ಖಾನ್‌ ಅಸಮ್ಮತಿ ಸೂಚಿಸಿದ್ದರು. 
,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News