ಕನ್ನಡಕ್ಕೆ ಡಬ್ಬಿಂಗ್ ಈಗ ಸ್ಪೈಡರ್ ಮ್ಯಾನ್ ಸರದಿ
Update: 2017-04-08 21:35 IST
ಇತ್ತೀಚೆಗೆ ಕನ್ನಡಕ್ಕೆ ಡಬ್ ಆದ ‘ಸತ್ಯದೇವ್ ಐಪಿಎಸ್’ ಹಾಗೂ ‘ನಾನು ನನ್ನ ಪ್ರೀತಿ’ ಚಿತ್ರಗಳಿಗೆ ಸ್ಯಾಂಡಲ್‌ವುಡ್ ಹಾಗೂ ಕನ್ನಡ ಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇವೆರಡೂ ಚಿತ್ರಗಳಿಗೂ ಕನ್ನಡ ಪ್ರೇಕ್ಷಕರು ಕ್ಯಾರೇ ಅನ್ನಲಿಲ್ಲ. ಆದಾಗ್ಯೂ ಪರಭಾಷೆಗಳಿಂದ ಕನ್ನಡಕ್ಕೆ ಡಬ್ ಆಗಲು ಅನೇಕ ಚಿತ್ರಗಳು ತುದಿಗಾಲಲ್ಲಿ ನಿಂತಿವೆ.
ಇದೀಗ ಹಾಲಿವುಡ್ ಚಿತ್ರ ಕೂಡಾ ಕನ್ನಡದಲ್ಲಿ ಡಬ್ ಆಗುವ ಸಿದ್ಧತೆಯಲ್ಲಿದೆ. ನೂತನ ಹಾಲಿವುಡ್ ಚಿತ್ರ ‘ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್’ ಕನ್ನಡ ಸೇರಿದಂತೆ 10 ಭಾರತೀಯ ಭಾಷೆಗಳಲ್ಲಿ ಡಬ್ ಆಗಲಿದೆಯಂತೆ. ಜುಲೈ 7ರಂದು ದೇಶಾದ್ಯಂತ ರಿಲೀಸ್ ಆಗಲಿರುವ ಈ ಚಿತ್ರದ ಟ್ರೇಲರ್ ಕೂಡಾ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದೆ.