×
Ad

ಸ್ವೀಡನ್ ದಾಳಿಗೆ ದುಃಖಿಸುವ ಮೋದಿಗೆ ದೇಶದಲ್ಲಾಗುವ ದಾಳಿಗಳು ಕಾಣುವುದಿಲ್ಲವೇ?

Update: 2017-04-09 22:34 IST

ಹೊಸದಿಲ್ಲಿ, ಎ.9: ಸ್ವೀಡನ್‌ಲ್ಲಾದ ಟ್ರಕ್ ದಾಳಿಯನ್ನು ಖಂಡಿಸಿದ ಪ್ರಧಾನಿಗೆ ಪುರುಸೊತ್ತಾದರೆ ದೇಶದಲ್ಲಿ ನಡೆಯು ತ್ತಿರುವ ಇದೇ ತೆರನಾದ ದಾಳಿಯನ್ನೂ ಅವರು ಖಂಡಿಸಲಿ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಆಗ್ರಹಿಸಿದ್ದಾರೆ. ರಾಜಸ್ಥಾನದ ಅಲ್ವಾರದಲ್ಲಿ ಗೋ ರಕ್ಷಕರ ದಾಳಿಯಿಂದ ಜಾನುವಾರು ವ್ಯಾಪಾರಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಲಾಲೂ ಪ್ರಧಾನಿಯ ವೌನವನ್ನು ಟೀಕಿಸಿದ್ದಾರೆ. ಸ್ಟಾಕ್‌ಹೋಮ್‌ನಲ್ಲಿ ನಡೆದ ದಾಳಿಯನ್ನು ಖಂಡಿಸುತ್ತಿದ್ದೇನೆ. ಬಲಿಪಶುಗಳ ಕುಟುಂಬದ ದುಃಖದಲ್ಲಿ ತಾನೂ ಭಾಗಿ ಎಂದು ಮೋದಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನ ಬೆನ್ನಿಗೆ ಪ್ರತಿಕ್ರಿಯಿಸಿದ ಲಾಲೂ ಯಾವಾಗಲಾದರೂ ಬಿಡುವು ಆದರೆ ನಿಮ್ಮ ಮೂಗಿನ ನೇರ, ಭಾರತಾಂಬೆಯ ಪುತ್ರರ ವಿರುದ್ಧ ಬಲಪಂಥೀಯ ಭಯೋತ್ಪಾದಕರು ನಡೆಸುತ್ತಿರುವ ದಾಳಿಯನ್ನೂ ಖಂಡಿಸಿರಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News