×
Ad

ಚುನಾವಣಾ ಆಯೋಗ ದೃತರಾಷ್ಟ್ರನಿದ್ದಂತೆ: ಅರವಿಂದ್ ಕೇಜ್ರಿವಾಲ್

Update: 2017-04-10 14:05 IST

 ಹೊಸದಿಲ್ಲಿ, ಎ.10: ಕೇಂದ್ರ ಚುನಾವಣಾ ಆಯೋಗವು ಮಹಾಭಾರತದ ದೃತರಾಷ್ಟ್ರನಂತೆ ವರ್ತಿಸುತ್ತಿದೆ. ಚುನಾವಣಾ ಮತ ಯಂತ್ರದ ಬಗ್ಗೆ ಆರೋಪ ಕೇಳಿಬರುತ್ತಿದ್ದರೂ ಚುನಾವಣಾ ಆಯೋಗ ಎವಿಎಂ ಯಂತ್ರ ಬಳಕೆಗೆ ತಡೆ ಹೇರಲು ಮುಂದಾಗುತ್ತಿಲ್ಲ ಎಂದು ಚುನಾವಣಾ ಆಯೋಗದ ವಿರುದ್ಧ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

‘‘ಚುನಾವಣಾ ಆಯೋಗ ದೃತರಾಷ್ಟ್ರನಂತೆ ವರ್ತಿಸುತ್ತಿದೆ. ದೃತರಾಷ್ಟ್ರ ತನ್ನ ಪುತ್ರ ದುರ್ಯೋದನನ್ನು ಅಧಿಕಾರಕ್ಕೆ ತರಲು ಶತಪ್ರಯತ್ನಪಟ್ಟಂತೆಯೇ ಚುನಾವಣಾ ಆಯೋಗ ನಡೆದುಕೊಳ್ಳುತ್ತಿದೆ. ಎವಿಎಂ ಯಂತ್ರದ ಬಗ್ಗೆ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಎ.26 ರಂದು ನಡೆಯಲಿರುವ ದಿಲ್ಲಿಯ ಮುನ್ಸಿಪಲ್ ಚುನಾವಣೆಯಲ್ಲಿ ಬ್ಯಾಲಟ್ ಪೇಪರ್‌ಗಳನ್ನು ಬಳಸಬೇಕೆಂಬುದು ನಮ್ಮ ಪಕ್ಷದ ಬೇಡಿಕೆಯಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

ರವಿವಾರ 9 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ 18 ಎವಿಎಂ ಯಂತ್ರಗಳಲ್ಲಿ ಗೋಲ್‌ಮಾಲ್ ನಡೆದ ಬಗ್ಗೆ ವರದಿಯಾಗಿದೆ. ನಾನು ಐಐಟಿ ಇಂಜಿನಿಯರ್. ಎವಿಎಂ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆಂದು ನನಗೆ ಗೊತ್ತಿದೆ. ಇಲ್ಲಿ ಯಂತ್ರನಿರ್ವಹಣೆಯಲ್ಲಿ ಅಸಮರ್ಪಕವಾಗಿಲ್ಲ. ಬದಲಿಗೆ ಅಕ್ರಮ ನಡೆಯುತ್ತಿದೆ. ಯಾವುದೇ ಬಟನ್ ಒತ್ತಿದರೂ ಬಿಜೆಪಿಗೆ ಮತಗಳು ಬೀಳುತ್ತಿವೆ. ಎಂಸಿಡಿ ಚುನಾವಣೆಯಲ್ಲಿ ಅಕ್ರಮ ಎವಿಎಂ ಯಂತ್ರಗಳನ್ನು ಬಳಕೆ ಮಾಡಬಾರದು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News