×
Ad

ಭೂಪಟಗಳನ್ನು ಡೌನ್‌ಲೋಡ್ ಮಾಡಬಹುದು, ಆದರೆ…

Update: 2017-04-11 12:51 IST

ಹೊಸದಿಲ್ಲಿ, ಎ. 11: ಸಾರ್ವಜನಿಕರು ಬಳಸಬಹುದಾದ 3000 ಭೂಪಟಗಳಿರುವ ವೆಬ್‌ಸೈಟ್‌ನ್ನು ಸರ್ವೇ ಇಂಡಿಯ ಜನರಲ್ ಅಫ್ ಇಂಡಿಯ ರೂಪಿಸಿದೆ. ಅದರೆ ಇದನ್ನು ಡೌನ್‌ಲೋಡ್ ಮಾಡಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಆಧಾರ್‌ನಂಬರನ್ನು ಬಳಸಿ   http:/soinakshe.uk.gov.in ಎನ್ನುವ ಪೋರ್ಟಲ್‌ನಿಂದ ಪ್ರತಿದಿವಸ ಒಬ್ಬ ಮೂರು ಭೂಪಟಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಭಾರತಕ್ಕಾಗಿ ಮ್ಯಾಪ್ ತಯಾರಿಸುವ ಸರ್ವೇಜನರಲ್ ಆಫ್ ಇಂಡಿಯಕ್ಕೆ 250ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಅದು ಸಾರ್ವಜನಿಕ ಉಪಯೋಗಕ್ಕೆ ಮ್ಯಾಪ್‌ಗಳಿರುವ ವೆಬ್‌ಸೈಟನ್ನು ರೂಪಿಸಿ ಜಾರಿಗೊಳಿಸುತ್ತಿದೆ.

ಭೂಪಟವನ್ನು ಕೇವಲ ಭಾರತೀಯರಿಗೆ ಮಾತ್ರ ಲಭ್ಯಗೊಳಿಸುವುದು ಎನ್ನುವ ಉದ್ದೇಶದಿಂದ ಆಧಾರ್ ಕಡ್ಡಾಯಗೊಳಿಸಲಾಗಿದೆ ಎಂದು ವಿಜ್ಞಾನ ತಂತ್ರಜ್ಞಾನ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

 ಆಧಾರ್ ನಂಬರ್ ಉಪಯೋಗಿಸುವುದು ನಾಗರಿಕತೆಯ ದಾಖಲೆಯಾಗಿ ಅಲ್ಲ. ಆದರೆ ಆದಾಯ ತೆರಿಗೆ ಪಾವತಿಗೆ ಕೇಂದ್ರಸರಕಾರ ಆಧಾರ್ ಕಡ್ಡಾಯ ಗೊಳಿಸಿದ್ದಕ್ಕಿಂತ ಒಂದು ದಿನ ಮೊದಲು ಭೂಪಟ ಡೌನ್‌ಲೋಡ್‌ಗೂ ಅದು ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News