×
Ad

ನಾಗರಹಾವಿನೊಂದಿಗೆ ಸೆಲ್ಫಿ ತೆಗೆದುಕೊಂಡ ಪ್ರವಾಸಿಗ. ಮತ್ತೇನಾಯಿತು ನೋಡಿ

Update: 2017-04-11 15:42 IST

ಜೋಧಪುರ್,ಎ.11 : ಸೆಲ್ಫಿ ಹಾವಳಿ ಅತಿಯಾಯಿತೇನೋ ಎಂದೆನಿಸುತ್ತಿದೆ. ಈ ಸೆಲ್ಫಿ ಹುಚ್ಚಿನಿಂದ ಹಲವರ ಪ್ರಾಣಪಕ್ಷಿ ಹಾರಿ ಹೋಗಿವೆ. ಜೋಧಪುರದಲ್ಲಿ ನಡೆದ ಘಟನೆಯೊಂದರಲ್ಲಿ ಹಾವಾಡಿಗನೊಬ್ಬ ವಿಷಕಾರಿ ನಾಗರಹಾವೊಂದನ್ನು ಪ್ರವಾಸಿಯೊಬ್ಬನ ಕೊರಳ ಸುತ್ತ ಹಾಕಿದ್ದು ನಂತರ ಪ್ರವಾಸಿಗ ಸೆಲ್ಫಿ ಒಂದಕ್ಕೆ ಪೋಸ್ ನೀಡಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ಪ್ರವಾಸಿಗನಿಗೆ ತಲೆಯಲ್ಲಿ ವಿಚಿತ್ರ ಅನುಭವವಾಗಿತ್ತು. ಹಾವು ತನಗೆ ಕಚ್ಚಿರಬಹುದೇ ಎಂಬ ಸಂಶಯದಿಂದ ಹಾವಾಡಿಗನಲ್ಲಿ ಆತ ಹೇಳಿಕೊಂಡಾಗ ಆತ ಅದಕ್ಕೆ ಕ್ಯಾರೇ ಅನ್ನಲಿಲ್ಲ. ಸ್ವಲ್ಪವೇ ಹೊತ್ತಿನಲ್ಲಿ ಆತ ಸ್ಮೃತಿ ತಪ್ಪಿ ಬಿದ್ದು ಬಿಟ್ಟನಲ್ಲದೆ ಮೃತಪಟ್ಟ.

ಇಂತಹ ಸೆಲ್ಫಿಗಳಿಂದ ಜೀವಕ್ಕೆಷ್ಟು ಅಪಾಯವೆಂಬುದನ್ನು ಅರಿತು ಮುಂದೆ ಹೆಜ್ಜೆಯಿಡಬೇಕಾಗಿದೆಯಾದರೂ ಜನರು ಅಪಾಯವನ್ನು ಲೆಕ್ಕಿಸದೆ ಸೆಲ್ಫಿ ಹುಚ್ಚಿಗೆ ಒಳಗಾಗಿರುವುದನ್ನು ನೋಡಿದರೆ ಅಯ್ಯೋ ಎಂದೆನಿಸದೆ ಇರದು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News