×
Ad

ಪತ್ರಕರ್ತರಿಗೆ ಉಗುಳಿ, ಕ್ಷಮೆ ಯಾಚಿಸಿದ ವಿಜಯಕಾಂತ್

Update: 2017-04-12 11:23 IST

ಚೆನ್ನೈ, ಎ. 12: ಪತ್ರಕರ್ತರಿಗೆ ಉಗುಳಿ ಅಪಮಾನಿಸಿದ್ದ ತಮಿಳು ನಟ, ರಾಜಕಾರಣಿ ವಿಜಯಕಾಂತ್ ಇಂಡಿಯನ್ ಪ್ರೆಸ್ ಕೌನ್ಸಿಲ್‌ನ ಕ್ಷಮೆ ಯಾಚಿಸಿದ್ದಾರೆ. ನಂತರ ಪ್ರೆಸ್ ಕೌನ್ಸಿಲ್ ಹಾಕಿದ್ದ ಮೊಕದ್ದಮೆಯನ್ನು ಹಿಂದೆಗೆದುಕೊಂಡಿದೆ. ವಕೀಲ ಮಣಿ ಎಂಬವರ ಮೂಲಕ ದಿಲ್ಲಿಯಲ್ಲಿರುವ ಪ್ರೆಸ್ ಕೌನ್ಸಿಲ್‌ನೊಡನೆ ವಿಜಯಕಾಂತ್ ಕ್ಷಮೆ ಯಾಚಿಸಿದ್ದಾರೆ. ತನ್ನ ವರ್ತನೆಯಲ್ಲಿ ಪತ್ರಕರ್ತರಿಗೆ ನೋವಾಗಿದೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಮಂಗಳವಾರ ಅವರು ಹೇಳಿದ್ದಾರೆ.

 ಹಿಂದಿನ ತಮಿಳುನಾಡು ವಿಧಾನಸಭೆಯಲ್ಲಿ ವಿಜಯಕಾಂತ್ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದರು. 2015ರಲ್ಲಿ ಪತ್ರಕರ್ತರು ಕೇಳಿದ್ದ ಪ್ರಶ್ನೆಯೊಂದಕ್ಕೆ ಕೆರಳಿದ್ದ ವಿಜಯಕಾಂತ್ ಪತ್ರಕರ್ತರತ್ತ ಉಗುಳಿದ್ದರು. ನಂತರ ಇದನ್ನು ಪ್ರತಿಭಟಿಸಿ ಪತ್ರಕರ್ತರು ವಿಜಯಕಾಂತ್ ಮನೆಗೆ ಜಾಥಾ ನಡೆಸಿದ್ದರು. ಶಾಸಕ ಪಿ.ಪಾರ್ಥಸಾರಥಿಯವರ ನೇತೃತ್ವದಲ್ಲಿ ವಿಜಯಕಾಂತ್ ಪಕ್ಷದ ಕಾರ್ಯಕರ್ತರು ಪತ್ರಕರ್ತರಿಗೆ ಕಲ್ಲೆಸೆದಿದ್ದರು.ಇದರಲ್ಲಿ ಹಲವು ಪತ್ರಕರ್ತರು ಗಾಯಗೊಂಡಿದ್ದರು. ಈ ಘಟನೆಯಲ್ಲಿ ಮದ್ರಾಸ್ ಹೈಕೋರ್ಟು ಸೂಚನೆಯಂತೆ ಪೊಲೀಸರು ಕೇಸು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News