ಬೀದಿನಾಯಿ ಕೊಂದದ್ದಕ್ಕೆ ಕೋರ್ಟಿನಿಂದ ದಂಡ ಕೇವಲ 750ರೂ.: ಬಹುಮಾನ 50,000ರೂ!

Update: 2017-04-12 06:25 GMT

ಪಿರವಂ(ಕೇರಳ) ಎ. 12: ಬೀದಿನಾಯಿಗಳನ್ನು ಕೊಂದದ್ದಕ್ಕಾಗಿ ಪಿರವಂ ನಗರಸಭೆಯ ಕೌನ್ಸಿಲರ್ ಜಿಲ್ಸ್‌ಪೆರಿಯಪ್ಪುರಂ ಸಹಿತ 10 ಮಂದಿಗೆ ಕೋರ್ಟು ದಂಡ ವಿಧಿಸಿ ತೀರ್ಪು ನೀಡಿದೆ. ತಲಾ 750 ರೂಪಾಯಿ ದಂಡವನ್ನು ಭರಿಸಬೇಕೆಂದು ಪಿರವಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಬಿಂದು ಮೇರಿ ಫೆರ್ನಾಂಡಿಸ್ ತನ್ನ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಬೀದಿನಾಯಿ ಕೊಂದದ್ದಕ್ಕಾಗಿ ಕೇರಳದಲ್ಲಿ ಪ್ರಕಟವಾದ ಪ್ರಥಮ ತೀರ್ಪು ಇದು. ಆದರೆ ಇದೇ ಕೌನ್ಸಿಲರ್‌ರಿಗೆ ಬೀದಿ ನಾಯಿ ಕೊಂದದ್ದಕ್ಕಾಗಿ ವ್ಯಕ್ತಿಯೊಬ್ಬರು 50,000ರು. ಬಹುಮಾನ ನೀಡಿದ್ದರು.

    2016 ಸೆಪ್ಟಂಬರ್ ಹದಿನಾರರಂದು ಪಿರವಂ ನಗರದಲ್ಲಿ ಕೌನ್ಸಿಲರ್ ಜಿಲ್ಸ್‌ರ ನೇತೃತ್ವದಲ್ಲಿ ಉಪಟಳಕಾರಿಯಾದ ಹತ್ತು ಬೀದಿನಾಯಿಯಗಳನ್ನು ಹತ್ಯೆಮಾಡಲಾಗಿತ್ತು. ಉಪಟಳ ನೀಡುವ ನಾಯಿಗಳನ್ನು ಕೊಲ್ಲುವಂತೆ ಕೊಚ್ಚೌಸೇಫನ್ ಎನ್ನುವವರು ಕರೆನೀಡಿದ್ದರು. ಇದಕ್ಕೆ ಸ್ಪಂದಿಸಿ ಕೌನ್ಸಿಲ್ ಜಿಲ್ಸ್ ಪೆರಿಯಪ್ಪನ್‌ರ ನೇತೃತ್ವದಲ್ಲಿ ಬೀದಿನಾಯಿಗಳ ಸಂಹಾರ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇದಕ್ಕಾಗಿ ಕೊಚ್ಚೌಸೇಫನ್‌ರು ಜಿಲ್ಸ್‌ಗೆ ಐವತ್ತುಸಾವಿರ ರುಪಾಯಿ ಬಹುಮಾನವನ್ನು ನೀಡಿದ್ದರು.

ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿದ ನಗರಸಭಾ ಸದಸ್ಯ ಜಿಲ್ಸ್ ಪೆರಿಯಪ್ಪನ್ ಇನ್ನು ಮುಂದೆಯೂ ಕಚ್ಚುವ ಬೀದಿನಾಯಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News