ಮುಖ್ಯನ್ಯಾಯಮೂರ್ತಿ ಸಹಿತ ಸುಪ್ರೀಂ ಕೋರ್ಟ್ ನ 6 ಜಡ್ಜ್ ಗಳಿಗೇ ಸಮನ್ಸ್!
ಕೊಲ್ಕತ್ತಾ, ಎ.14: ದೇಶದ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ ಕೊಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರು, ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಹಾಗೂ ಇತರ ಆರು ಮಂದಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಸಮನ್ಸ್ ನೀಡಿದ್ದಾರೆ.
ಕೊಲ್ಕತ್ತಾದಲ್ಲಿರುವ ತಮ್ಮ ನಿವಾಸ ನ್ಯಾಯಾಲಯದಲ್ಲಿ ಎಪ್ರಿಲ್ 28ರಂದು ಹಾಜರಾಗುವಂತೆ ಸೂಚಿಸಲಾಗಿದೆ. ಇದಕ್ಕೂ ಮುನ್ನ ಖೇಹರ್ ಹಾಗೂ ಇತರ ಆರು ನ್ಯಾಯಾಧೀಶರು ಕರ್ಣನ್ ವಿರುದ್ಧ ಕಾನೂನು ಕ್ರಮದ ಸಂಬಂಧ ವಿಚಾರಣೆ ಆರಂಭಿಸಿದ್ದರು. ಕರ್ಣನ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ಕರ್ಣನ್ ಹಾಜರಾಗಿದ್ದರು. ಅಂತೆಯೇ ಏಳು ಮಂದಿ ನ್ಯಾಯಾಧೀಶರ ಸಂವಿಧಾನ ಪೀಠ ಕರ್ಣನ್ ವಿರುದ್ಧ ಜಾಮೀನು ಪಡೆಯಲು ಅವಕಾಶವಾಗುವಂತೆ ಬಂಧನದ ವಾರೆಂಟ್ ಕೂಡಾ ಜಾರಿಗೊಳಿತ್ತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ವಿರೋಧಿ ತಡೆ ಅನ್ವಯ ಜಾಮೀನು ನೀಡಬಹುದಾದ ವಾರೆಂಟ್ ಜಾರಿಗೊಳಿಸಿತ್ತು.
ಇದಕ್ಕೆ ಪ್ರತಿಯಾಗಿ ಕರ್ಣನ್ ಸ್ವಯಂಪ್ರೇರಿತ ನೋಟಿಸ್ ನೀಡಿದ್ದು, ತಮ್ಮ ನಿವಾಸ ನ್ಯಾಯಾಲಯದಿಂದಲೇ ನೋಟಿಸ್ ನೀಡಿದ್ದಾರೆ. ಈ ಪ್ರಕರಣ ನಡೆಸುತ್ತಿರುವ ಎಲ್ಲ ನ್ಯಾಯಮೂರ್ತಿಗಳ ವಿರುದ್ಧ ಸಮನ್ಸ್ ಜಾರಿಗೊಳಿಸಲಾಗಿದೆ.