ಶತಕೋಟಿ ಕನಸು ಹೆಣೆದ 'ಸಚಿನ್'!
ಮುಂಬೈ, ಎ.14: ನೂರು ಕೋಟಿ ರೂಪಾಯಿ ಗಳಿಕೆ ಸಾಧ್ಯತೆ ಇರುವ 'ಸಚಿನ್ ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
200 ಆ್ಯಂಡ್ ನಾಟೌಟ್ ಪ್ರೊಡಕ್ಷನ್ ಇದನ್ನು ಮುದ್ರಿಸಿದೆ. ಈ ಚಿತ್ರದ ಟ್ರೇಲರ್ ಅನ್ನು ಗುರುವಾರ ಬಿಡುಗಡೆ ಮಾಡಲಾಯಿತು. ತೆಂಡೂಲ್ಕರ್ ಅವರ ನಿರೂಪಣೆಯನ್ನು ಸ್ವತಃ ಅವರೇ ನಿರ್ವಹಿಸಿದ್ದಾರೆ. ಇದು ನೇರವಾಗಿ ಹೃದಯಕ್ಕೆ ತಟ್ಟುವ ನಿರೂಪಣೆಯಾಗಿದೆ.
ಭಾರತ ಮೊಟ್ಟಮೊದಲು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಗೆದ್ದಾಗ ಸಚಿನ್ 10 ವರ್ಷ ವಯೋಮಿತಿಯ ಮಗುವಾಗಿದ್ದರು ಎಂದರೆ ನೀವು ನಂಬುತ್ತೀರಾ?
ಚಿತ್ರದಲ್ಲಿ ಜಯ ಹಾಗೂ ವಿಜಯೋತ್ಸವದ ಅದ್ಧೂರಿ ವರ್ಣನೆ ಇದೆ. ಅತ್ಯುತ್ತಮ ಚಿತ್ರ ದೃಶ್ಯವೆಂದರೆ, ಸಚಿನ್ ಅವರ ವೈಯಕ್ತಿಕ ಬದುಕಿನ ತುಣುಕುಗಳು. ಕ್ರಿಕೆಟ್ ಹೇಗೆ ಅವರಿಗೆ ಪ್ರಥಮ ಆದ್ಯತೆಯಾಗಿತ್ತು ಎನ್ನುವುದನ್ನೂ ವಿವರಿಸಲಾಗಿದೆ. ಮಕ್ಕಳ ಜತೆ ಮಾತನಾಡುವ ವೇಳೆಯೂ, ತೀರಾ ಲಘುವಾಗಿ ಮಾತನಾಡಿದರು. ನೂರುಕೋಟಿ ಅಭಿಮಾನಿಗಳನ್ನು ಸಚಿನ್ ಪ್ರತೀ ವರ್ಷ ಪಡೆಯುತ್ತಿದ್ದಾರೆ ಎನ್ನುವುದಾಗಿದೆ. ಸಂಘರ್ಷ ಮತ್ತಿತರ ವಿವಾದಾತ್ಮಕ ಅಂಶಗಳು ಇದರಲ್ಲಿ ಸೇರಿಲ್ಲ.