×
Ad

ಫಾರೂಕ್ ಅಬ್ದುಲ್ಲ ತಲೆಗೆ ಒಂದು ಲಕ್ಷ ರೂ; ಬಜರಂಗ ದಳದ ನಾಯಕನ ಹೊಸ ಆಫರ್

Update: 2017-04-16 10:15 IST

ಹೊಸದಿಲ್ಲಿ, ಎ.16: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಫಾರೂಕ್ ಅಬ್ದುಲ್ಲ ತಲೆಯನ್ನು ಯಾರಾದರೂ  ತಂದು ಕೊಟ್ಟರೆ ಅವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಆಗ್ರಾದ ಬಗರಂಗ ದಳದ ನಾಯಕ ಗೋವಿಂದ್ ಪರಾಶಾರ್ ಹೇಳಿದ್ದಾರೆ.
ಸೈನಿಕರ ಮೇಲೆ ಹಲ್ಲೆ ನಡೆಸಿರುವ ಸ್ಥಳೀಯರ ಪರ ನಿಂತಿರುವ ಆರೋಪ ಹೊತ್ತಿರುವ ಫಾರೂಕ್‌ ಅಬ್ದುಲ್ಲ ವಿರುದ್ಧ ಹರಿಹಾಯ್ದಿರುವ ಗೋವಿಂದ್‌ ಪರಾಶಾರ್ ಬಜರಂಗ ದಳದ ಸ್ಥಳೀಯ ಗೋರಕ್ಷಾ ದಳದ ನಗರ ಘಟಕದ ಮುಖ್ಯಸ್ಥರಾಗಿದ್ದಾರೆ.
"ಮಾಜಿ ಮುಖ್ಯ ಮಂತ್ರಿ  ಫಾರೂಕ್ ಅಬ್ದುಲ್ಲ ಅವರು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಿದ ಸ್ಥಳೀಯರ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.ಇದರೊಂದಿಗೆ ನಮ್ಮ ಸೈನಿಕರನ್ನು ಅವಮಾನಿಸುವ ಅವರ ನಿಲುವು ಖಂಡನೀಯ. ಇಂತಹ ರಾಷ್ಟ್ರವಿರೋಧಿ ಕೃತ್ಯವನ್ನು ಸಹಿಸಲು ಅಸಾಧ್ಯ” ಎಂದು ಗೋವಿಂದ್ ಪರಾಶಾರ್ ಅಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News