×
Ad

ಕಾಳಧನ ಪ್ರಕರಣ ನಿರ್ವಹಣೆಗೆ ನೂತನ ಅಂತರ್ಜಾಲ ವ್ಯವಸ್ಥೆ

Update: 2017-04-16 20:01 IST

ಹೊಸದಿಲ್ಲಿ, ಎ.16: ಅಕ್ರಮ ಸಂಪತ್ತು ಅಥವಾ ಕಾಳಧನ ಪ್ರಕರಣದ ಬಗ್ಗೆ ತನಿಖೆ ನಡೆಸಲು ಹಾಗೂ ನಿರ್ವಹಿಸಲು ಅನುಕೂಲವಾಗುವ ನೂತನ ಅಂತರ್ಜಾಲ ವ್ಯವಸ್ಥೆಯೊಂದನ್ನು ಸಿಬಿಐ ಆರಂಭಿಸಲಿದೆ .

ಬ್ಯಾಂಕ್, ಆದಾಯ ತೆರಿಗೆ ಇಲಾಖೆ , ಆರ್ಥಿಕ ಗುಪ್ತಚರ ವಿಭಾಗ ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಲು, ಸಂಗ್ರಹಿಸಿದ ಮಾಹಿತಿಗಳ ತುಲನೆ ಮಾಡಲು ಈ ನೂತನ ವ್ಯವಸ್ಥೆ ನೆರವಾಗಲಿದೆ.

ಹಾಲಿ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ ಎಂದು ಸಿಬಿಐ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳುವ ಸಮಿತಿಯೊಂದು ಸೂಚಿಸಿದ ಬಳಿಕ ಈ ಕ್ರಮಕ್ಕೆ ಸಿಬಿಐ ಮುಂದಾಗಿದೆ. ಹೊಸ ವ್ಯವಸ್ಥೆಯು ಹೆಚ್ಚು ವೈಜ್ಞಾನಿಕವಾಗಿರುತ್ತದೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗುಪ್ತ ಆದಾಯದ ಬಗ್ಗೆ ಮಾಹಿತಿ ಪಡೆಯಲು ತನಿಖಾ ಸಂಸ್ಥೆಗೆ ನೆರವಾಗುತ್ತದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಕಳೆದ ವರ್ಷ ಸಿಬಿಐ 1,300 ಸರಕಾರಿ ಸಿಬ್ಬಂದಿಗಳು ಒಳಗೊಂಡಿರುವ 673ಕ್ಕೂ ಹೆಚ್ಚಿನ ಭ್ರಷ್ಟಾಚಾರದ ಪ್ರಕರಣ ದಾಖಲಿಸಿಕೊಂಡಿದೆ.


 
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News