ಮಲಪ್ಪುರಂ ಉಪ ಚುನಾವಣೆ: ಗೆಲುವಿನ ಹಾದಿಯಲ್ಲಿ ಯುಡಿಎಫ್ ಅಭ್ಯರ್ಥಿ ಕುಂಞಾಲಿ ಕುಟ್ಟಿ

Update: 2017-04-17 06:56 GMT

ಮಲಪ್ಪುರಂ, ಎ.17: ಮಲಪ್ಪುರಂ ಲೋಕಸಭಾ ಕ್ಷೇತದ ಉಪಚುನಾವಣೆಯ ಮತೆಣಿಕೆಯ ಕಾರ್ಯ ಪ್ರಗತಿಯಲ್ಲಿದ್ದು  ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಪಿ.ಕೆ.ಕುಂಞಾಲಿಕುಟ್ಟಿ 2 ಲಕ್ಷ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ಹೆಜ್ಜೆ ಇರಿಸಿದ್ದಾರೆ.
ಎಲ್ ಡಿಎಫ್ ನೇತೃತ್ವದ ಸಿಪಿಎಂನ ಎಂಬಿ ಫೈಸಲ್‌ ವಿರುದ್ಧ ಐಯುಎಂಎಲ್ ಅಭ್ಯರ್ಥಿ ಕುಂಞಲಿಕುಟ್ಟಿ ಆರಂಭದಿಂದಲೂ ಮುನ್ನಡೆ ಸಾಧಿಸಿದ್ದಾರೆ. ದಾಖಲೆಯ ಅಂತರದಲ್ಲಿ ಗೆಲುವಿನತ್ತ ಮುನ್ನುಗ್ಗಿದ್ದಾರೆ. ಬಿಜೆಪಿಯ ಎನ್.ಶ್ರೀಪ್ರಕಾಶ್‌ ಮತ್ತು  ಆರು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಐಯುಎಂಎಲ್ ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಇ. ಅಹ್ಮದ್‌ ನಿಧನರಾದ ಕಾರಣದಿಂದಾಗಿ ತೆರವಾದ ಮಲಪ್ಪುರಂ ಲೋಕಸಭಾ ಕ್ಷೇತ್ರದ ಸ್ಥಾನಕ್ಕೆ ಉಪಚುನಾವಣೆ ಕಳೆದ ಎ.12ರಂದು ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News