ಉತ್ತರಪ್ರದೇಶದಲ್ಲಿ ಬದುಕಬೇಕಾದರೆ, ಯೋಗಿ ನಾಮ ಜಪಿಸಿರಿ..!

Update: 2017-04-17 08:50 GMT

ಮೀರತ್, ಎ. 17: "ಯೋಗಿಯ ನಾಮ ಜಪಿಸದಿದ್ದರೆ ಉತ್ತರಪ್ರದೇಶವನ್ನು ತೊರೆಯಿರಿ"ಎಂದು ಮೀರತ್‌ನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಕಚೇರಿಯ ಸಮೀಪ ಬೋರ್ಡ್‌ಹಾಕಲಾಗಿದೆ. ಉತ್ತರಪ್ರದೇಶದಲ್ಲಿ ಜೀವಿಸಬೇಕಿದ್ದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಹೆಸರನ್ನು ಜಪಿಸುತ್ತಿರಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ನಿಲ್ಲುವಂತಿಲ್ಲ. ಈ ಬೋರ್ಡನ್ನು ಯೋಗಿ ಆದಿತ್ಯನಾಥ್ ಸ್ಥಾಪಿಸಿದ್ದ ಹಿಂದೂ ಯುವವಾಹಿನಿ ಹಾಕಿದೆ.

ಬೋರ್ಡ್‌ನಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್, ಪ್ರಧಾನಿ ನರೇಂದ್‌ರ ಮೋದಿಯ ಚಿತ್ರ ಕೂಡಾಇದೆ. ಬೋರ್ಡ್ ವಿವಾದ ಕಾವೇರಿದಾಗ ಬೋರ್ಡನ್ನು ಅಲ್ಲಿ ಯಾರು ಸ್ಥಾಪಿಸಿದ್ದಾರೆ ಎನ್ನುವ ತನಿಖೆಗೆ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ರವೀಂದರ್ ಗೌಡ್ ಬೋರ್ಡ್‌ನ್ನು ಹಾಕಿದ್ದು ಯಾರೆಂದು ತನಿಖೆಯನ್ನು ಪೊಲೀಸರ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿಸಿದರು. ಕಳೆದ ದಿವಸ ಯುವವಾಹಿನಿ ಕಾರ್ಯಕರ್ತರ ನೇತೃತ್ವದ ಸಾಂಸ್ಕೃತಿಕ ಗೂಂಡಾಗಳ ತಂಡ ಇಲ್ಲಿನ ಮನೆಯೊಂದಕ್ಕೆ ನುಗ್ಗಿ ಮುಸ್ಲಿಮ್ ಯುವಕ ಮತ್ತು ಆತನ ಗೆಳತಿಗೆ ಹಲ್ಲೆನಡೆಸಿತ್ತು . ನಂತರ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಲ್ಲೆ ನಡೆಸಿದ ವೀಡಿಯೊ ವೈರಲ್ ಆಗಿತ್ತು. ಈ ಘಟನೆಯ ಬಳಿಕ ಯೋಗಿಯೋಗಿ ಬೋರ್ಡ್ ಮೀರತ್‌ನಲ್ಲಿ ಪ್ರತ್ಯಕ್ಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News