×
Ad

ಅಧ್ಯಾಪಕಿ ಏಟಿಗೆ ವಿದ್ಯಾರ್ಥಿನಿಯ ಎದಿರೇಟು!

Update: 2017-04-18 11:46 IST

ಹೊಸದಿಲ್ಲಿ, ಎ. 18: ಅಧ್ಯಾಪಕರುವಿದ್ಯಾರ್ಥಿಗಳನ್ನು ಶಿಕ್ಷಿಸುವುದು ಭಾರತದಲ್ಲಿ ಸಾಮಾನ್ಯ. ಆದರೆ ವಿದ್ಯಾರ್ಥಿಗಳು ಅಧ್ಯಾಪಕರ ಮೇಲೆ ಹಲ್ಲೆನಡೆಸುವ ಘಟನೆ ಅಪರೂಪವಾಗಿ ನಡೆಯುತ್ತದೆ. ಚೀನಾದಲ್ಲಿ ಇಂತಹ ಒಂದು ಅಪರೂಪದ ಘಟನೆ ನಡೆದಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಅದರ ವೀಡಿಯೊ ವೈರಲ್ ಆಗಿದೆ.

ಚೀನಾದ ಸೋಶಿಯಲ್ ನೆಟ್ ವರ್ಕಿಂಗ್ ಸೈಟ್, ವೇಬೊ ಈ ದೃಶ್ಯಗಳನ್ನು ಪ್ರದರ್ಶಿಸುತ್ತಿವೆ. ತರಗತಿ ಕೋಣೆಯಲ್ಲಿ ಕೆಟ್ಟದಾಗಿ ವರ್ತಿಸಿದ ವಿದ್ಯಾರ್ಥಿನಿಯೊಂದಿಗೆ ಅಧ್ಯಾಪಕಿ ಕೋಪಗೊಳ್ಳುತ್ತಾರೆ. ಆದರೆ ತನ್ನ ಮುಖಕ್ಕೆ ಹೊಡೆಯಿರಿ ಎಂದು ವಿದ್ಯಾರ್ಥಿನಿ ಶಿಕ್ಷಕಿಗೆ ಕಪಾಲವನ್ನು ತೋರಿಸುತ್ತಿದ್ದಾಳೆ.

ವಿದ್ಯಾರ್ಥಿನಿಯ ವರ್ತನೆ ಅಸಹನೀಯವಾದಾಗ ವಿದ್ಯಾರ್ಥಿನಿ ಮುಖಕ್ಕೆ ಟೀಚರ್‌ ಹೊಡೆಯುತ್ತಾರೆ. ಆನಂತರ ಅವರಿಬ್ಬರಲ್ಲಿ ಹೊಕೈನಡೆದಿದೆ. ಇವೆಲ್ಲವು ವೀಡಿಯೊದಲ್ಲಿ ದಾಖಲಾಗಿದೆ.

ವೀಡಿಯೊವನ್ನು ಚೀನಾದಲ್ಲಿ ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ವಿವರಗಳಿಲ್ಲ. ಯಾವಶಾಲೆಯ ದೃಶ್ಯವಿದೆಂದು ಸ್ಪಷ್ಟವಾಗಿಲ್ಲ. ಅಧ್ಯಾಪಕಿಗೆ ಹೊಡೆದ ವಿದ್ಯಾರ್ಥಿನಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಟೀಕಿಸಲಾಗಿದೆ. ಈವರೆಗೆ ವೀಡಿಯೊವನ್ನು 20 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News