×
Ad

ಕೇರಳ: ಜಯ ಲೀಗ್‌ಗೆ, ಸಿಹಿ ಕಾಂಗ್ರೆಸ್‌ಗೆ !

Update: 2017-04-18 12:12 IST

ಮಲಪ್ಪುರಂ, ಎ.18: ಮಲಪ್ಪುರಂ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮ್ ಗೆದ್ದಿದ್ದರೂ ಅದರ ಸಿಹಿಯನ್ನು ಕಾಂಗ್ರೆಸ್ ಅನುಭವಿಸುತ್ತದೆ. ಹೆಚ್ಚುಸ್ಪಷ್ಟವಾಗಿ ಹೇಳುವುದಿದ್ದರೆ ಉಮ್ಮನ್‌ಚಾಂಡಿ ಮತ್ತು ರಮೇಶ್‌ಚೆನ್ನಿತ್ತಲರಿಗೆ ಇದು ಸಿಹಿಯಾಗಿದೆ. ಮಲಪ್ಪುರಂ ಉಪಚುನಾವಣೆಯಲ್ಲಿ ಯುಡಿಎಫ್ ಮತ್ತು ಮುಸ್ಲಿಮ್ ಲೀಗ್ ಅಭ್ಯರ್ಥಿ ಕುಂಞಾಲಿಕುಟ್ಟಿ 1,71,023 ಮತಗಳಿಂದ ಸಮೀಪದ ಸ್ಪರ್ಧಿಎಲ್ ಡಿಎಫ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

  ಮಲಪ್ಪುರಂ ಉಪಚುನಾವಣೆಯಲ್ಲಿ ಈಬಾರಿಕಾಂಗ್ರೆಸ್ ಪ್ರಮಾಣಿಕವಾಗಿ ತೊಡಗಿಸಿಕೊಂಡಿತ್ತು. ಕಳೆದ ಸ್ಥಳೀಯಾಡಳಿತ ಚುನಾವಣೆಯ ವೇಳೆ ಇಲ್ಲಿ ಯುಡಿಎಫ್‌ನ ಚಟುವಟಿಕೆಗಳು ಕಂಡವರಿಗೆ ಈಸಲದ ಯುಡಿಎಫ್ ಒಗ್ಗಟ್ಟು ಆಶ್ಚರ್ಯಕ್ಕೆ ಕಾರಣವಾಗಿತ್ತು. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹತ್ತುದಿವಸಕ್ಕೂ ಹೆಚ್ಚು ಇಲ್ಲಿ ಪ್ರಚಾರದ ನೇತೃತ್ವವನ್ನು ವಹಿಸಿದ್ದರು. ಸಂಪೂರ್ಣ ಬೆಂಬಲವನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ರಮೇಶ್‌ಚೆನ್ನಿತ್ತಲರೂ ನೀಡಿದರು. ಮಲಪ್ಪುರಂನಲ್ಲಿ ಯುಡಿಎಫ್‌ನ ನಾಯಕತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿತ್ತು. ಹಿರಿಯ ನಾಯಕ ಆ್ಯಂಟನಿ ಕೂಡಾಪ್ರಚಾರದಲ್ಲಿ ಭಾಗವಹಿಸಿದ್ದರು. ಈ ಎಲ್ಲ ಒಗ್ಗಟ್ಟಿನ ಹಿನ್ನೆಲೆಯಲ್ಲಿಮಲಪ್ಪುರಂನಲ್ಲಿ ಯುಡಿಎಫ್ ಶ್ರೇಷ್ಠ ವಿಜಯವನ್ನೇ ದಾಖಲಿಸಿತು.

ಎಲ್‌ಡಿಎಫ್‌ಗೂ ಭರವಸೆ ಹುಟ್ಟಿಸಿದೆ:

ಗೆದ್ದಿದ್ದು ಯುಡಿಎಫ್ ಆಗಿದ್ದರೂ ಎಲ್‌ಡಿಎಫ್ ಅಭ್ಯರ್ಥಿ ಎಂ.ಬಿ. ಫೈಝಲ್‌ರಿಗೂ ಮಲಪ್ಪುರಂ ಭರವಸೆ ಹುಟ್ಟಿಸಿದೆ. ಹಿಂದಿನ ಚುನಾವಣೆಯಲ್ಲಿ ಎಲ್‌ಡಿಎಫ್‌ನಿಂದ ಇ. ಅಹ್ಮದ್ ವಿರುದ್ಧ ಸ್ಪರ್ಧಿಸಿದ್ದ ಪಿ,ಕೆ. ಝೈನಬಾರಿಗಿಂತ ಒಂದು ಲಕ್ಷಕ್ಕೂ ಅಧಿಕ ಹೆಚ್ಚು ಮತಗಳನ್ನು ಹೊಸ ಮುಖವಾಗಿಯೂ ಫೈಝಲ್ ಗಳಿಸಿಕೊಂಡಿದ್ದಾರೆ.

ಎಳಮರಂ ಕರೀಮ್‌ನ ಬದಲಾಗಿ ಇಪಿ ಜಯರಾಜನ್ ಕ್ಷೇತ್ರದ ಜವಾಬ್ದಾರಿಕೆಯನ್ನು ವಹಿಸಿಕೊಂಡು ಕ್ಷೇತ್ರದಲ್ಲಿಯೇ ತಂಗಿದ್ದು, ಕಾನಂರಾಜೇಂದ್ರನ್‌ರೂ ಇಲ್ಲಿ ಸಂಪೂರ್ಣ ತೊಡಗಿಸಿಕೊಂಡರು . ಅಂತಿಮವಾಗಿ ಸಿಪಿಎಂ 3,44,307 ಮತಗಳನ್ನು ಇಲ್ಲಿ ಗಳಿಸಿಯೇ ಬಿಟ್ಟಿತು.

ಕಮಲ ವಿಫಲ:

ಬಿಜೆಪಿಗೆ ಇಲ್ಲಿ ಒಂದು ಲಕ್ಷ ಮತಗಳಿವೆ ಎಂದು ನಿರೀಕ್ಷೆಯಿತ್ತು. ಹೆಚ್ಚಿನವರು ಇಲ್ಲಿ 80ಸಾವಿರಕ್ಕೂ ಹೆಚ್ಚು ಮತ ಸಿಗಬಹುದೆಂದು ಭಾವಿಸಿದ್ದರು. ಕುಮ್ಮನಂ ರಾಜಶೇಖರನ್ ಇಲ್ಲಿ ವಾರಗಳಷ್ಟು ಕಾಲ ಉಳಿದುಕೊಂಡಿದ್ದರು. ಆರೆಸ್ಸೆಸ್ ಮತ್ತು ಪರಿವಾರ ಸಕ್ರಿಯವಾಗಿತ್ತು. ಆದರೆ ಬಿಜೆಪಿ ನಿರೀಕ್ಷೆಯ ಹತ್ತಿರ ವೂ ಸುಳಿಯಲಿಲ್ಲ.

ಉತ್ತರಪ್ರದೇಶದಲ್ಲಿ ಆದಿತ್ಯನಾಥರ ಆಡಳಿತದ ಹಿನ್ನೆಲೆಯಲ್ಲಿ ಬಿಜೆಪಿಯ ತೀವ್ರ ಕೋಮುವಾದವನ್ನು ಇತರ ಮೈತ್ರಿಕೂಟಗಳು ಜನರಮುಂದೆ ಸಮರ್ಥವಾಗಿ ಮಂಡಿಸಿದ್ದು ಬಿಜೆಪಿಯ ವೈಫಲ್ಯಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News