ಹಾಡುಹಗಲೇ ಮನೆ ದರೋಡೆ: ಬಲೆಗೆ ಬಿದ್ದ ಮಗ !
ಮೇಪ್ಪಯೂರ್, ಎ. 18: ಎರಡುದಿವಸಗಳ ಹಿಂದೆ ಕೇರಳ ಮೇಪ್ಪಯೂರ್‌ನಲ್ಲಿ ಹಾಡಹಗಲೇ ದರೋಡೆನಡೆದಿದ್ದು, ಪ್ರಕರಣದಲ್ಲಿ ದೂರದಾರರ ಪುತ್ರನನ್ನೇ ಕಳ್ಳತನ ಆರೋಪದಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ಮಾತ್ರವಲ್ಲ ಈ ಸಂಭಾವಿತ ಕಳ್ಳ ಅಧ್ಯಾಪಕ ಕೂಡಾ ಆಗಿದ್ದಾನೆ. ಮೆರಟ್ಟುಕುನ್ನತ್ ಅಬ್ದುಲ್ಲರ ಮನೆಯಿಂದ 10,02,000 ರೂಪಾಯಿ ಮತ್ತು 90 ಪವನ್ ಚಿನ್ನ ಕದ್ದದ್ದು ಅವರ ಪುತ್ರ ಅಧ್ಯಾಪಕನಾದ ವಿ.ಪಿ. ಜಲೀಲ್(30). ಆರೋಪಿಯನ್ನು ಪಯ್ಯೋಳಿ ಸಿಐ ದಿನೇಶ್ ಕೊರೊತ್ತ್ ಬಂಧಿಸಿದ್ದು. ಅಧ್ಯಾಪಕನ ಶಾಲೆಯ ಕಪಾಟಿನಿಂದ ಕಳ್ಳತನ ಎಸಗಿದ ಹಣ ಮತ್ತು ಚಿನ್ನವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕಳ್ಳತನ ವೆಸಗಿದ ಅಧ್ಯಾಪಕ ಮನೆಯ ಸಿಸಿಟಿವಿಯ ಹಾರ್ಡ್ ಡಿಸ್ಕ್ ಮತ್ತು ಇತರ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಪ್ಪಿಸಿಟ್ಟಿದ್ದಾನೆ. ಇದನ್ನು ಪೊಲೀಸರಿಗೆ ವಶ ಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಂಭಾವಿತ ಅಧ್ಯಾಪಕನ ಕೃತ್ಯಕ್ಕೆ ಜನರು ನಿಬ್ಬೆರಗಾಗಿದ್ದಾರೆ.
ಸಾಲ ಮತ್ತು ವ್ಯಾಪಾರದಲ್ಲಿ ನಷ್ಟವನ್ನು ಭರಿಸಲಿಕ್ಕಾಗಿ ತಾನು ಕದ್ದಿರುವುದಾಗಿ ಆರೋಪಿ ಪೊಲೀಸರಲ್ಲಿಒಪ್ಪಿಕೊಂಡಿದ್ದು, ತಂದೆಯಲ್ಲಿ ಐದು ಲಕ್ಷ ಹಣ ಕೇಳಿದ್ದೆ. ಅವರು ಕೊಟ್ಟಿಲ್ಲ.ಆದ್ದರಿಂದ ಪತ್ನಿಮತ್ತು ಮಕ್ಕಳು ಶಾಲೆ ರಜೆಯಲ್ಲಿ ತವರು ಮನೆಗೆ ಹೋಗಿದ್ದಾಗ ಈಕೃತ್ಯವೆಸಗಿದ್ದೇನೆ ಎಂದು ವಿವರಿಸಿದ್ದಾನೆ. ಪೊಲೀಸರು ಪಯ್ಯೋಳಿ ಕೋರ್ಟಿಗೆ ಹಾಜರು ಪಡಿಸಿದರೂ ದೂರುದಾರ ತಂದೆಯ ವಿನಂತಿಯ ಮೇರೆಗೆ ಕೋರ್ಟು ಜಾಮೀನು ನೀಡಿದೆ.