ಜಾನುವಾರುಗಳ ಹಾವಳಿ: ಈ ರಾಜ್ಯದಲ್ಲಿ 30 ತಿಂಗಳಲ್ಲಿ 300 ಮಂದಿ ಸಾವು !

Update: 2017-04-18 07:44 GMT

ಜಲಂಧರ್, ಎ. 18: ಬೀದಿಯಲ್ಲಿ ಅಲೆದಾಡುತ್ತಿರುವ ಜಾನುವಾರುಗಳಿಂದ ಅಪಘಾತ ಸಂಭವಿಸಿ ಪಂಜಾಬ್‌ನಲ್ಲಿ ಕಳೆದ 30 ತಿಂಗಳಲ್ಲಿ 300 ಮಂದಿ ಪ್ರಾಣತೆತ್ತಿದ್ದಾರೆ ಎಂದು ರಾಜ್ಯದ ಜಾನುವಾರು ಸೇವಾ ಆಯೋಗ(ಪಿಜಿಎಸ್ಸಿ) ಬಹಿರಂಗಪಡಿಸಿದೆ.

 ರಸ್ತೆಗಳಲ್ಲಿ ಜಾನುವಾರುಗಳು ನಿಶ್ಚಿಂತವಾಗಿ ವಿಹರಿಸುತ್ತವೆ. ಇದರಿಂದಾಗಿ ಎರಡೂವರೆ ವರ್ಷಗಳಲ್ಲಿ ಮೂರು ದಿವಸಕ್ಕೆ ಒಬ್ಬನಂತೆ ಜಾನುವಾರು ಕಾರಣದಿಂದ ಬಲಿಯಾಗುತ್ತಿದ್ದಾರೆ. ಆದರೆ ಇದನ್ನು ಪಂಜಾಬ್ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ.ಎಂದು ಪಿಜಿಎಸ್ಸಿ ಚೇರ್‌ಮೆನ್ ಕಾಂತಿಲಾಲ್ ಭಗತ್ ಹೇಳಿದರು.

ರಾಜ್ಯದ ರಸ್ತೆಗಳಲ್ಲಿ 1,06,000 ಜಾನುವಾರುಗಳು ಅಲೆಮಾರಿಗಳಾಗಿ ಅಲೆದಾಡುತ್ತಿವೆ. ಅವುಗಳಿಗೆ ಮಾಲಕರೇ ಇಲ್ಲ. ಮನುಷ್ಯರಿಗೆ ಮಾತ್ರವಲ್ಲ ಜಾನುವಾರುಗಳಿಗೂ ಗಂಭೀರ ಅಪಾಯಗಳಾಗಿವೆ. ಮಾಲಕರಿಲ್ಲದ ಜಾನುವಾರುಗಳನ್ನು ವಿಶೇಷ ಸಂರಕ್ಷಣಾ ಕೇಂದ್ರಕ್ಕೆ ಅಟ್ಟಲು ಸರಕಾರ ಕ್ರಮಕೈಗೊಳ್ಳಬೇಕೆಂದು ಕಾಂತಿಲಾಲ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News