ಜಾರ್ಖಂಡ್‌ನಲ್ಲಿ ಮಾವೋವಾದಿಗಳಿಂದ ತಂದೆ-ಮಗನ ಹತ್ಯೆ
Update: 2017-04-18 15:16 IST
ಮೇದಿನಿನಗರ,ಎ.18: ಪಲ್ವಾಮು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮಾವೋವಾದಿ ಗಳು ತಂದೆ ಮತ್ತು ಮಗನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಬಿಹಾರದ ಔರಂಗಾಬಾದ್ ಜಿಲ್ಲೆಗೆ ಹೊಂದಿಕೊಂಡಿರುವ ಕೌಲುವಾ ಗ್ರಾಮಕ್ಕೆ ನುಗ್ಗಿದ 20ಕ್ಕೂ ಅಧಿಕ ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪು ಶಿವನಾಥ್ ಯಾದವ (50) ಮತ್ತು ಆತನ ಪುತ್ರ ಗುಡ್ಡು ಯಾದವ (25) ಅವರನ್ನು ಮನೆಯಿದ ಹೊರಗೆಳೆದು ತಂದು ಗುಂಡುಗಳನ್ನು ಹಾರಿಸಿ ಹತ್ಯೆಗೈದಿದೆ ಎಂದು ಪೊಲೀಸರು ತಿಳಿಸಿದರು.
ಗ್ರಾಮಸ್ಥರಲ್ಲಿ ಭೀತಿ ಮೂಡಿಸಲು ಮಾವೋವಾದಿಗಳು ಈ ಕೃತ್ಯವನ್ನೆಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ನೆರೆಯ ಬಿಹಾರಕ್ಕೆ ಪರಾರಿಯಾಗಿದ್ದಾರೆಂದು ಶಂಕಿಸಲಾಗಿರುವ ಮಾವೋವಾದಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.