ಅಝಾನ್ ವಿವಾದ : ನನ್ನ ನಿಲುವಿಗೆ ಈಗಲೂ ಬದ್ಧ - ಸೋನು ನಿಗಮ್

Update: 2017-04-18 10:50 GMT

ಮುಂಬೈ,ಎ.18: ‘ಬಲವಂತದ ಧಾರ್ಮಿಕತೆ ’ಯ ಕುರಿತು ತನ್ನ ಟ್ವೀಟ್‌ಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತರಾಟೆಗೆ ಗುರಿಯಾದ ಬಳಿಕ ಗಾಯಕ ಸೋನು ನಿಗಮ್ ಅವರು, ತನ್ನ ಹೇಳಿಕೆಗಳು ಯಾವುದೇ ಧರ್ಮದ ವಿರುದ್ಧವಾಗಿರಲಿಲ್ಲ, ಅವು ಧ್ವನಿವರ್ಧಕಗಳ ಬಳಕೆಯ ವಿರುದ್ಧವಾಗಿದ್ದವು ಎಂದು ಸ್ಪಷ್ಟನೆ ನೀಡಿದ್ದಾರೆ.

ತನ್ನ ಹೇಳಿಕೆಯನ್ನು ಪ್ರಶ್ನಿಸಿ ಅಥವಾ ಬೆಂಬಲಿಸಿ ಸರಣಿ ಪ್ರತಿಕ್ರಿಯೆಗಳು ವ್ಯಕ್ತವಾದ ಬಳಿಕ ಸೋನು ‘ಪ್ರೀತಿಯ ಪ್ರತಿಯೊಬ್ಬರೇ, ನಿಮ್ಮ ನಿಲುವು ನಿಮ್ಮ ಸ್ವಂತ ಬುದ್ಧಿಶಕ್ತಿಯನ್ನು ಬಯಲುಗೊಳಿಸಿದೆ. ಮಸೀದಿಗಳಲ್ಲಿ ಮತ್ತು ಮಂದಿರಗಳಲ್ಲಿ ಧ್ವನಿವರ್ಧಕ ಬಳಕೆಯಾಗಬಾರದು ಎಂಬ ನನ್ನ ನಿಲುವಿಗೆ ನಾನು ಬದ್ಧನಾಗಿದ್ದೇನೆ ’ ಎಂದು ಮಂಗಳವಾರ ಟ್ವೀಟಿಸಿದ್ದಾರೆ.

ನಮಾಝ್‌ಗೆ ಕರೆ ನೀಡುವ ಬೆಳಗಿನ ಜಾವದ ಅಝಾನ್ ಬಗ್ಗೆ ತನ್ನ ಸಿಟ್ಟನ್ನು ಸೋಮವಾರ ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ್ದ ಅವರು, ‘ನಾನು ಮುಸ್ಲಿಮನಲ್ಲ. ಆದರೂ ಬೆಳಗಿನ ಅಝಾನ್‌ನಿಂದಾಗಿ ಏಳುವಂತಾಗಿದೆ. ನಮ್ಮ ದೇಶದಲ್ಲಿ ಈ ಬಲವಂತದ ಧಾರ್ಮಿಕತೆ ಎಂದು ನಿಲ್ಲುತ್ತದೆ ’ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News