ತೀವ್ರ ಉಷ್ಣತೆ: ತಮಿಳುನಾಡಿನಲ್ಲಿ ಮೂರು ದಿವಸ ರೆಡ್ ಅಲರ್ಟ್

Update: 2017-04-18 11:30 GMT

ಚೆನ್ನೈ, ಎ. 18: ಇಂದಿನಿಂದ ಮೂರು ದಿವಸಗಳ ಕಾಲ ಕಠಿಣ ಉಷ್ಣತೆಯ ಸಾಧ್ಯತೆ ಇದೆ. ಆದ್ದರಿಂದ ತಮಿಳುನಾಡಿನ ಹದಿನೆಂಟು ಜಿಲ್ಲೆಗಳಲ್ಲಿ ರಾಜ್ಯ ಸರಕಾರ ರೆಡ್ ಅಲರ್ಟ್ ಘೋಷಿಸಿದೆ.45.1ಡಿಗ್ರಿಸೆಲ್ಸಿಯಸ್‌ನಿಂದ 48.5 ಡಿಗ್ರಿಸೆಲ್ಸಿಯಸ್ ವರೆಗೆ ಉಷ್ಣತೆ ಮುಂದಿನ ಮೂರು ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಗಳಿವೆ ಎಂದು ಹವಾಮಾನ ನಿರೀಕ್ಷಣಾ ಕೇಂದ್ರ ತಿಳಿಸಿದೆ.

ಈ ಕುರಿತು ಜನರಿಗೆ ಮುನ್ಸೂಚನೆ ನೀಡಿದ ಹವಾಮಾನ ಕೇಂದ್ರ ಬೆಳಗ್ಗೆ ಹನ್ನೊಂದು ಗಂಟೆಯಿಂದ ಮಧ್ಯಾಹ್ನ ನಾಲ್ಕು ಗಂಟೆವರೆಗೆ ಜನರು ಮನೆಯಿಂದ ಹೊರಗೆ ಬರಬಾರದು ಎಂದು ಸೂಚನೆ ನೀಡಿದೆ.ಮಾತ್ರವಲ್ಲ ದಿನಾಲುಆರೇಳು ಲೀಟರ್ ನೀರು ಕುಡಿಯಬೇಕೆಂದು ಜನರಿಗೆ ಅದು ಸಲಹೆ ಕೊಟ್ಟಿದೆ.

 ಚೆನ್ನೈ, ಕಾಂಚಿಪುರಂ, ತಿರುವಳ್ಳೂರ್, ಕೃಷ್ಣಗಿರಿ, ಧರ್ಮಪುರಿ, ಸೇಲಂ, ನಾಮಕ್ಕಳ್, ಈರೋಡ್, ಕರೂರ್, ತಿರುಚ್ಚಿರಾಪಳ್ಳಿ, ಅರಿಯಲೂರ್, ಪೆರಂಬಲೂರ್ ಮುಂತಾದ ಜಿಲ್ಲೆಗಳಲ್ಲಿ ತೀಕ್ಷ್ಣ ಉಷ್ಣತಾ ಹವಾಮಾನ ಇರಲಿದೆ. ಇದಕ್ಕೆ ಅಗತ್ಯವಿರುವ ಪೂರ್ವಸಿದ್ಧತೆಗಳನ್ನು ನಡೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ತಮಿಳ್ನಾಡು ದುರಂತಪರಿಹಾರ ನಿರ್ದೇಶಕಿ ನಿರ್ದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News