ಟ್ರಂಪ್ ರನ್ನು ಅಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಳಿಸಲಾಗಿದೆ ಎಂದು ಸುಳ್ಳು ಹೇಳಿದ ಮೇಲೆ ಶಾಂತಿಯಿಂದ ಮೃತಪಟ್ಟ ವ್ಯಕ್ತಿ

Update: 2017-04-19 13:04 GMT

ನ್ಯೂಯಾರ್ಕ್, ಎ. 19: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಕಂಡರೆ 75 ವರ್ಷದ ಮೈಕಲ್ ಗಾರ್ಲಂಡ್ ಎಲಿಯಟ್‌ಗೆ ಆಗುತ್ತಿರಲಿಲ್ಲ. ಟ್ರಂಪ್ ಅಧ್ಯಕ್ಷರಾಗಿರುವುದರ ವಿರುದ್ಧ ಅವರು ಪ್ರತಿ ದಿನವೂ ಅತೃಪ್ತಿ ವ್ಯಕ್ತಪಡಿಸುತ್ತಿದ್ದರು.

ಅವರ ಸಾಯುವ ಕ್ಷಣ ಹತ್ತಿರ ಬಂದಾಗ, ಅಧ್ಯಕ್ಷ ಟ್ರಂಪ್‌ರನ್ನು ಅಧಿಕಾರದಿಂದ ಉಚ್ಚಾಟಿಸಲಾಗಿದೆ ಎಂಬುದಾಗಿ ಅವರ ಮಾಜಿ ಪತ್ನಿ ಸುಳ್ಳು ಹೇಳಿದರು. ಆಗ ಗಾರ್ಲಂಡ್ ‘ಶಾಂತಿಯುತ’ವಾಗಿ ಕೊನೆಯುಸಿರೆಳೆದರು ಎಂದು ‘ನ್ಯೂಯಾರ್ಕ್ ಡೇಲಿ’ ವರದಿ ಮಾಡಿದೆ.

ಅನಾರೋಗ್ಯದಿಂದ ಹಾಸಿಗೆ ಹಿಡಿಯುವವರೆಗೂ ಅವರು ಟ್ರಂಪ್‌ಗೆ ಸಂಬಂಧಿಸಿದ ಸುದ್ದಿಗಳನ್ನು ನಿಕಟವಾಗಿ ಗಮನಿಸುತ್ತಿದ್ದರು.

‘‘ಡೊನಾಲ್ಡ್ ಟ್ರಂಪ್‌ರನ್ನು ಅಧಿಕಾರದಿಂದ ಉಚ್ಚಾಟಿಸಲಾಗಿದೆ’’ ಎಂಬುದಾಗಿ ‘ಮಾಜಿ ಪತ್ನಿ ಹಾಗೂ ಉತ್ತಮ ಸ್ನೇಹಿತೆ’ ತೆರೇಸಾ ಎಲಿಯಟ್ ಹೇಳಿದ ಬಳಿಕ ಅವರು ಎಪ್ರಿಲ್ 6ರಂದು ‘ಶಾಂತಿಯುತವಾಗಿ’ ನಿಧನ ಹೊಂದಿದರು ಎಂದು ಪತ್ರಿಕೆ ಹೇಳಿದೆ.

ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ತನ್ನ ಮನೆಯಿಂದ ಫೋನ್‌ನಲ್ಲಿ ಸುಳ್ಳು ಹೇಳಿದೆ ಎಂದು 68 ವರ್ಷದ ತೆರೇಸಾ ಹೇಳಿದರು.

‘‘ಅವರು ತನ್ನ ಕೊನೆಯ ಕ್ಷಣಗಳನ್ನು ತಲುಪುತ್ತಿರುವುದು ನನಗೆ ಗೊತ್ತಿತ್ತು. ನಾನು ಹೇಳುವ ಮಾತುಗಳು ಅವರನ್ನು ಸಂತೈಸುತ್ತವೆ ಎನ್ನುವುದೂ ಗೊತ್ತಿತ್ತು. ಹಾಗೆಯೇ ಮಾಡಿದೆ. ಆಗ ಅವರು ತನ್ನ ಕೊನೆಯ ಉಸಿರನ್ನು ಎಳೆದರು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News