ಯೋಗಿ ಸ್ಥಾಪಿಸಿದ ಕಾಲೇಜಿನಲ್ಲಿ ಗಮನ ಸೆಳೆಯುತ್ತಿರುವ ಮುಸ್ಲಿಂ ಪ್ರಾಂಶುಪಾಲ

Update: 2017-04-20 06:42 GMT

ಯಂಕೇಶ್ವರ್(ಪೌರಿ), ಎ.20: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಖರ ಹಿಂದುತ್ವವಾದಿಯೆಂದು ಪರಿಗಣಿತರಾಗಿರಬಹುದು, ಆದರೆ ನೆರೆಯ ಉತ್ತರಾಖಂಡದಲ್ಲಿ ಅವರು ಸ್ಥಾಪಿಸಿದ ಪದವಿ ಕಾಲೇಜೊಂದರಲ್ಲಿ ಮುಸ್ಲಿಂ ಪ್ರಾಂಶುಪಾಲರೊಬ್ಬರಿದ್ದಾರೆ. ‘‘ಈ ಸಂಸ್ಥೆ ನ್ಯಾಯಪರತೆ, ಸಹಿಷ್ಣುತೆ ಮತ್ತು ಮಾನವತೆಯ’’ ಪ್ರತೀಕವಾಗಿದೆ ಎಂದು ಪ್ರಾಂಶುಪಾಲ ಅಫ್ತಬ್ ಅಹ್ಮದ್ ಹೇಳುತ್ತಾರೆ.

ತಮ್ಮ ತವರು ಜಿಲ್ಲೆ ಪೌರಿಯಲ್ಲಿ ಯೋಗಿ 1999ರಲ್ಲಿ ಸ್ಥಾಪಿಸಿದ ಈ ಮಹಾಯೋಗಿ ಗುರುಗೋರಖನಾಥ ಪದವಿ ಕಾಲೇಜು ಯಂಕೇಶ್ವರ ಬ್ಲಾಕಿನ ಬಿಥ್ಯಾನಿ ಎಂಬಲ್ಲಿದ್ದು ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸರಕಾರದ ಅನುದಾನಿತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.
‘‘ಈ ಸಂಸ್ಥೆಯ ನಿಜವಾದ ಸೊಗಸಿನ ಅಂಶವೇನೆಂದರೆ ಇಲ್ಲಿ ಜಾತಿ, ಧರ್ಮ ಅಥವಾ ವರ್ಣಾಧರಿತ ಬೇಧಭಾವವಿಲ್ಲ. ಬೆಟ್ಟದ ಮೇಲಿನ ಪರಿಸರದಂತೆ ಅದು ಪರಿಶುದ್ಧ,’’ ಎನ್ನುತ್ತಾರೆ ಡೆಹ್ರಾಡೂನ್ ಮೂಲದ ಅಫ್ತಬ್ ಅಹ್ಮದ್.

ಈ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳಿದ್ದು ಅವರಲ್ಲಿ ಹೆಚ್ಚಿನವರು ಹುಡುಗಿಯರಾಗಿದ್ದಾರೆ. ಕಾಲೇಜಿಗೆ ಎಚ್‌ಎನ್‌ಬಿ ಗರ್ವಾಲ್ ವಿಶ್ವವಿದ್ಯಾಲಯದ ಅಧೀನದಲ್ಲಿ ಇದು ಕಾರ್ಯಾಚರಿಸುತ್ತಿದ್ದು ಸಂಸ್ಥೆಯ ಶಿಕ್ಷಕರು ಎನ್‌ಇಟಿ ಅರ್ಹತೆ ಪಡೆದವರಾಗಿದ್ದಾರೆ. ಈ ಜಿಲ್ಲೆಯಲ್ಲಿ ಬೇರೆ ಯಾವುದೇ ಪದವಿ ಕಾಲೇಜು ಇಲ್ಲ. ಅಹ್ಮದ್ ಅವರು 2014ರಲ್ಲಿ ಈ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News