ಮುಂದಿನ ತಿಂಗಳು ಎರ್ದೊಗಾನ್, ಟ್ರಂಪ್ ಭೇಟಿ !
ಅಂಕಾರ,ಎ. 20: ಮುಂಬರುವ ಮೇ ತಿಂಗಳಲ್ಲಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾಗಲಿದ್ದಾರೆ. ಟರ್ಕಿಯ ವಿದೇಶ ಸಚಿವಾಲಯ ಈ ವಿಷಯವನ್ನು ಪ್ರಕಟಿಸಿದೆ. ಟರ್ಕಿಯಲ್ಲಿ ಅಧ್ಯಕ್ಷೀಯ ಮಾದರಿ ಆಡಳಿತಕ್ಕೆ ತರುವ ನಿಟ್ಟಿನಲ್ಲಿ ನಡೆದ ಜನಮತ ಸಂಗ್ರಹದಲ್ಲಿ ಎರ್ದೊಗಾನ್ ವಿಜಯಿಯಾದ ವೇಳೆ ಟ್ರಂಪ್ ಎರ್ದೊಗಾನ್‌ರನ್ನು ದೂರವಾಣಿ ಮೂಲಕ ಅಭಿನಂದಿಸಿದ್ದರು. ಉಭಯ ದೇಶಗಳ ಸಂಬಂಧ ಉತ್ತಮ ಪಡಿಸುವ ನಿಟ್ಟಿನಲ್ಲಿ ಎರ್ದೊಗಾನ್ ಅಮೆರಿಕ ಪ್ರವಾಸ ನಡೆಸಲಿದ್ದಾರೆ.
ಸಂಬಂಧ ಉತ್ತಮ ಗೊಂಡರೆ ಟರ್ಕಿ ಸೈನಿಕ ವಿಫಲ ಕ್ಷಿಪ್ರಕಾಂತಿಯ ಸೂತ್ರಧಾರರೆನ್ನಲಾದ ಫತ್ಹುಲ್ಲಾ ಗುಲಾನ್‌ರನ್ನು ಅಮೆರಿಕ ತಮಗೆ ಹಸ್ತಾಂತರಿಸಬಹುದು ಎಂದು ಟರ್ಕಿ ನಿರೀಕ್ಷೆ ವ್ಯಕ್ತಪಡಿಸಿದೆ. ನ್ಯಾಟೋ ಸಮ್ಮೇಳನದಿಂದ ಮೊದಲು ಎರ್ದೊಗಾನ್ ಅಮೆರಿಕಕ್ಕೆ ಭೇಟಿ ನೀಡುವರೆಂದು ಟರ್ಕಿ ವಿದೇಶ ಸಿವ ಮೆವ್ಲೆತ್ ಕಾವುಸೊಗ್ಲು ಹೇಳಿದ್ದಾರೆ. ಕಳೆದ ತಿಂಗಳು ಅಮೆರಿಕ ವಿದೇಶ ಸಚಿವ ರೆಕ್ಸ್ ಟಿಲ್ಲರ್ಸನ್ ಟರ್ಕಿಗೆ ಭೇಟಿ ನೀಡಿದ್ದರು. ನ್ಯಾಟೊ ಸಮ್ಮೇಳನ ಮೇ ತಿಂಗಳ ಕೊನೆವಾರದಲ್ಲಿ ನಡೆಯಲಿದೆ. ಟ್ರಂಪ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
.