ಪಾನ್ ಕಾರ್ಡ್‌ಗೆ ಆಧಾರ್ ಕಡ್ಡಾಯಗೊಳಿಸಿದ್ದು ಏಕೆ?

Update: 2017-04-21 09:52 GMT

ಹೊಸದಿಲ್ಲಿ,ಎ.21: ತನ್ನ ಆದೇಶವನ್ನು ಮೀರಿ ಪಾನ್ ಕಾರ್ಡ್‌ಗೆ ಆಧಾರ್ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದ್ದು ಏಕೆ ಎಂದು ಸವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರವನ್ನು ಶುಕ್ರವಾರ ಏರಿದ ಧ್ವನಿಯಲ್ಲಿ ಪ್ರಶ್ನಿಸಿದೆ. ಪಾನ್ ಕಾರ್ಡ್‌ಗೆ ಆಧಾರ್ ಸಲ್ಲಿಕೆಯನ್ನು ಐಚ್ಛಿಕವನ್ನಾಗಿಸಿ ಅದು ಈ ಹಿಂದೆ ಆದೇಶವನ್ನು ಹೊರಡಿಸಿತ್ತು.

ಸರಕಾರವು ಬ್ಯಾಂಕ್ ಖಾತೆಗಳನ್ನು ತೆರೆಯಲು, ಹೊಸ ಮೊಬೈಲ್ ಸಂಪರ್ಕಗಳನ್ನು ಮತ್ತು ಪಾಸ್‌ಪೋರ್ಟ್‌ಗಳನ್ನು ಪಡೆಯಲು ಆಧಾರ್‌ನ್ನು ಕಡ್ಡಾಯಗೊಳಿಸುವುದು ತಪ್ಪಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ಹೇಳಿತ್ತು. ಆದರೆ ಈ ಕಡ್ಡಾಯದ ಪಟ್ಟಿಯಲ್ಲಿ ಪಾನ್ ಕಾರ್ಡ್ ಅಥವಾ ಸರಕಾರಿ ಸೌಲಭ್ಯಗಳನ್ನು ಅದು ಸೇರಿಸಿರಲಿಲ್ಲ.

 ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸುವುದು ಸರಕಾರಕ್ಕೆ ಉಳಿದಿರುವ ಏಕಮೇವ ಆಯ್ಕೆಯಾಗಿದೆ. ಬೇನಾಮಿ ಕಂಪನಿಗಳಿಗೆ ಹಣವನ್ನು ಸಾಗಿಸಲು ಹಲವಾರು ಪಾನ್ ಕಾರ್ಡ್‌ಗಳು ಬಳಕೆಯಾಗುತ್ತಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ. ಇದನ್ನು ತಡೆಯಲು ಪಾನ್‌ಗೆ ಆಧಾರ್ ಕಡ್ಡಾಯಗೊಳಿಸುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಪರ ಹಾಜರಿದ್ದ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News