×
Ad

ನಝೀಬ್‌ಗೆ ಎಬಿವಿಪಿ ವಿದ್ಯಾರ್ಥಿಗಳ ಬೆದರಿಕೆ ಪ್ರಕರಣ: ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲು ಹೈಕೋರ್ಟ್ ಸೂಚನೆ

Update: 2017-04-21 23:05 IST

ಹೊಸದಿಲ್ಲಿ, ಎ.21: ಆರು ತಿಂಗಳ ಹಿಂದೆ ಜೆಎನ್‌ಯು ವಿದ್ಯಾರ್ಥಿ ನಝೀಬ್ ಅಹ್ಮದ್ ಮತ್ತು ಎಬಿವಿಪಿಗೆ ಸೇರಿದ 9 ವಿದ್ಯಾರ್ಥಿಗಳ ಮಧ್ಯೆ ನಡೆದ ಮಾತಿನ ಚಕಮಕಿ ಸಂದರ್ಭ ಅಲ್ಲಿ ಹಾಜರಿದ್ದ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳುವಂತೆ ದಿಲ್ಲಿ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.

 ಇದುವರೆಗೂ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳದಿರುವ ಬಗ್ಗೆ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ದೀಪಾ ಶರ್ಮ ಅವರಿದ್ದ ನ್ಯಾಯಪೀಠವೊಂದು ದಿಲ್ಲಿ ಪೊಲೀಸರನ್ನು ಪ್ರಶ್ನಿಸಿತು. ಜಗಳದ ಬಳಿಕ ಅಹ್ಮದ್ ನಾಪತ್ತೆಯಾಗಿದ್ದಾನೆ.

ಜಗಳದ ಸಂದರ್ಭ ಅಹ್ಮದ್‌ಗೆ ಬೆದರಿಕೆ ಒಡ್ಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಯಾವ ರೀತಿಯ ಬೆದರಿಕೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಿ ಎಂದು ಕೋರ್ಟ್ ಸೂಚಿಸಿತು. ಮಾತಿನ ಚಕಮಕಿ ವೇಳೆ ಅಹ್ಮದ್ ಓರ್ವ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದು ಪ್ರತಿಯಾಗಿ ಆ ಒಂಬತ್ತು ಮಂದಿಯ ತಂಡ ಆತನಿಗೆ ಬೆದರಿಕೆ ಒಡ್ಡಿತ್ತು ಎನ್ನಲಾಗಿದೆ. ಅಹ್ಮದ್‌ಗೆ ಸೇರಿದ್ದ ಲ್ಯಾಪ್‌ಟಾಪ್, ಮೊಬೈಲ ಫೋನ್ ಹಾಗೂ ಎಬಿವಿಪಿ ಬೆಂಬಲಿಗ ವಿದ್ಯಾರ್ಥಿಗಳ ಮೊಬೈಲ್ ಫೋನ್‌ನಲ್ಲಿದ್ದ ವಿವರವನ್ನು ಹೈದರಾಬಾದ್‌ನ ಪ್ರಯೋಗಾಲಯ ನೀಡಿದ್ದು ಇದನ್ನು ಸೀಲ್ ಮಾಡಿದ ಕವರ್‌ನಲ್ಲಿಟ್ಟು ಪೊಲಿೀಸರು ನ್ಯಾಯಾಲಯಕ್ಕೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News