×
Ad

ಕಮಲ್‌ನಾಥ್ ಬಿಜೆಪಿಗೆ ಹೋಗಿಲ್ಲ: ಕಾಂಗ್ರೆಸ್ಸಿನಲ್ಲಿದ್ದಾರೆ!

Update: 2017-04-22 12:54 IST

ಹೊಸದಿಲ್ಲಿ,ಎ. 22: ಹಿರಿಯ ಕಾಂಗ್ರೆಸ್ ನಾಯಕ ಕಮಲ್‌ನಾಥ್ ಬಿಜೆಪಿ ಸೇರುತ್ತಾರೆನ್ನುವ ಊಹಾಪೋಹಗಳನ್ನು ಕಾಂಗ್ರೆಸ್ ತಳ್ಳಿಹಾಕಿದೆ. ಇದು ಬಿಜೆಪಿಯ ಅಪಪ್ರಚಾರ ಎಂದು ಅದು ಹೇಳಿದೆ. ಕಮಲ್‌ನಾಥ್ ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಲಿದ್ದಾರೆ ಎಂದು ಪ್ರಚಾರವಾಗಿತ್ತು. ಆದರೆ ಹಾಗೇನೂ ಸಂಭವಿಸಲಿಲ್ಲ.

ಕಮಲ್‌ನಾಥ್ ಬಿಜೆಪಿಗೆ ಹೋಗುತ್ತಾರೆ ಎನ್ನುವ ಅಪಪ್ರಚಾರವನ್ನು ಬಿಜೆಪಿಯೇ ಉದ್ದೇಶಪೂರ್ವಕ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು. ಕಾಂಗ್ರೆಸ್ ನಾಯಕರು ಒಬ್ಬೊಬ್ಬರೆ ಪಕ್ಷತೊರೆಯುತ್ತಿದ್ದಾರೆ ಎನ್ನುವ ವದಂತಿಸೃಷಿಸುವ ಪ್ರಯತ್ನ ಇದು. ಆದರೆ ಕಮಲನಾಥ್ ಪಕ್ಷದ ಕಷ್ಟದ ದಿನಗಳಲ್ಲಿಯೂ ಕಾಂಗ್ರೆಸ್‌ನೊಂದಿಗಿದ್ದವರು.ಮತ್ತು ಪಕ್ಷ ಪುನಶ್ಚೇತನಕ್ಕೆ ದುಡಿದವರು ಎಂದು ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

 ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿದ್ದ. 1977, 1980, 1999, 2014ರಲ್ಲಿ ಅವರು ಪಕ್ಷದ ಪುನಶ್ಚೇತನಕ್ಕೆ ಪ್ರಯತ್ನಿಸಿದ್ದಾರೆ. ಒಬ್ಬ ನಾಯಕನ ಮಹತ್ವ ಗೊತ್ತಾಗುವುದು ಅಧಿಕಾರದಲ್ಲಿರುವಾಗ ಅಲ್ಲ. ಅಧಿಕಾರ ಇಲ್ಲದಿರುವಾಗ. ಇದನ್ನು ಕಮಲ್‌ನಾಥ್ ಹಲವು ಬಾರಿ ತೋರಿಸಿಕೊಟ್ಟ ನಾಯಕ ಆಗಿದ್ದಾರೆ ಎಂದು ಸುರ್ಜೇವಾಲ ಹೇಳಿದ್ದಾರೆ. ಪಕ್ಷದಲ್ಲಿ ತನ್ನ ಸ್ಥಾನಮಾನಗಳನ್ನು ದೃಢಪಡಿಸಿಕೊಳ್ಳಲು ಕಮಲ್‌ನಾಥ್ ಕೆಲವು ದಿವಸಗಳಿಂದ ಪ್ರಯತ್ನ ನಡೆಸುತ್ತಿದ್ದಾರೆ. ಇದು ಅವರು ಬಿಜೆಪಿ ಸೇರುತ್ತಿದ್ದಾರೆ ಎನ್ನುವ ಅಪಪ್ರಚಾರಕ್ಕೆ ಕಾರಣವಾಯಿತೆಂದು ಕಾಂಗ್ರೆಸ್ ನೀಡಿದ ಸ್ಪಷ್ಟೀಕರಣದ ನಡುವೆಯೂ ಸಿಗುತ್ತಿರುವ ಸೂಚನೆಯಾಗಿದೆ.

 ಮಧ್ಯಪ್ರದೇಶದ ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಅರುಣ್ ಯಾದವ್‌ರನ್ನು ಬದಲಾಯಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಈ ಸ್ಥಾನ ತನಗೆ ದೊರೆಯಬೇಕೆಂದು ಕಮಲ್‌ನಾಥ್ ಬಯಸುತ್ತಿದ್ದಾರೆ. ಆದರೆ ಜ್ಯೋತಿರಾದಿತ್ಯ ಸಿಂಧಿಯರನ್ನು ಪಿಸಿಸಿ ಅಧ್ಯಕ್ಷರನ್ನಾಗಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಕಮಲ್‌ನಾಥ್ ಹತ್ತು ತಿಂಗಳ ಮೊದಲುಪಂಜಾಬ್‌ನ ಹೊಣೆಯಿರುವ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದಿರಾಗಾಂಧಿ ಹತ್ಯೆಯ ನಂತರ ಸಿಖ್ ಹತ್ಯಾಕಾಂಡದಲ್ಲಿ ಕಮಲ್‌ನಾಥ್‌ರಿಗೆ ಪಾತ್ರ ಇತ್ತು ಎನ್ನುವುದನ್ನು ರಾಜಕೀಯ ಎದುರಾಳಿಗಳು ಎತ್ತಿತೋರಿಸಬಹುದು ಎನ್ನುವ ಸ್ಥಿತಿ ನಿರ್ಮಾಣವಾದಾಗ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು. ಲೋಕಸಭೆಯಲ್ಲಿಪಕ್ಷದ ನಾಯಕನ ಸ್ಥಾನ ಮಲ್ಲಿಕಾರ್ಜುನ ಖರ್ಗೆ ಕೊಟ್ಟದ್ದರಲ್ಲಿ ಕೂಡಾ ಕಮಲ್‌ನಾಥ್‌ರಿಗೆ ಬೇಸರ ಇದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News